ಪುತ್ತೂರು:.ಯುವ ಬಂಟರು ಸಮಾಜದಲ್ಲಿ ಶಕ್ತಿಯಾಗಿ ಬೆಳೆಯಬೇಕು. ಇದಕ್ಕೆ ಪುತ್ತೂರು ಯುವ ಬಂಟರ ನೇತೃತ್ವದಲ್ಲಿ ಜರಗಿದ ಅದ್ದೂರಿ ಕಾರ್ಯಕ್ರಮ ಬಂಟೆರೆ ಪರ್ಬ ಮಾದರಿಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಭಾನುವಾರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ‘ತುಳುನಾಡ ಬಂಟೆರೆ ಪರ್ಬ-2023 ‘ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬಂಟರ ಪರವಾಗಿ ಯಾವುದೇ ಸರಕಾರ ಈತನಕ ಬೆಂಬಲ ನೀಡಿಲ್ಲ.ರಾಜ್ಯದ ಈಗಿನ ಸರಕಾರ ಬಂಟರ ಅಭಿವೃದ್ಧಿ ಪ್ರಾಧಿಕಾರಕ್ಕೆ 250 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಬಂಟ ಸಮಾಜದ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಉದ್ದೇಶ ನನ್ನದು.ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಸ್ಥಾನಮಾನ ನೀಡಬೇಕೆಂದು ನಾನು ವಿಧಾನಸಭಾಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ. ಪುತ್ತೂರು ಬಂಟ ಸಮಾಜದಿಂದ ಎಲ್‌ಕೆಜಿಯಿಂದ ಪ್ರಾಥಮಿಕ ಹಂತ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಸಂಸ್ಥೆ ಆಗಬೇಕೆಂಬ ಕಲ್ಪನೆ ಇದೆ. ಬಂಟ ಸಮಾಜದ ಅಭಿವೃದ್ಧಿಗೆ ಪೂರ್ಣ ರೀತಿಯ ಸಹಕಾರ ನೀಡುತ್ತೇನೆ. ಜೊತೆಗೆ ಬಂಟರ ಸಂಘದಿಂದ ನೂತನವಾಗಿ ಜಾಗ ಖರೀದಿಗೂ ಸಹಕಾರ ನೀಡುತ್ತೇನೆ ಎಂದು ಹೇಳಿದರಲ್ಲದೆ, ಯುವ ಬಂಟರು ಒಗ್ಗೂಡಿ ಅದ್ಭುತವಾದ ಕಾಠ್ಯಕ್ರಮ ಆಯೋಜಿಸಿದ್ದಾರೆ. ಬಂಟರ ಭವನ ಸಮಾಜ ಬಾಂಧವರಿಂದ ತುಂಬಿದ್ದು, ತುಂಬಾ ಸಂತೋಷ ತಂದಿದೆ. ಬಂಟ ಸಮಾಜದ ಗೌರವ, ಘನತೆಯನ್ನು ಎತ್ತಿ ತೋರಿಸುವ ಕೆಲಸವನ್ನು ಸದಾ ಮಾಡುತ್ತೇನೆ. ಜೊತೆಗೆ ಭ್ರಷ್ಟಾಚಾರ ಮುಕ್ತವಾದ ಆಡಳಿತವನ್ನು ನಾನು ನೀಡುತ್ತೇನೆ ಎಂದು ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಯುವ ಬಂಟರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಬಂಟ ಸಮಾಜದ ಆಚಾರ ವಿಚಾರ ಸಂಸ್ಕೃತಿಯನ್ನು ತೋರಿಸುವ ಬಂಟೆರೆ ಪರ್ಬ ಕಾಠ್ಯಕ್ರಮ ಆಯೋಜಿಸಿದ ಯುವ ಬಂಟರ ಸಂಘದ ಕಾರ್ಯ ಪ್ರಶಂಸನೀಯ ಎಂದರು.
ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಮಾಜಿ ಸಚಿವ ರಮಾನಾಥ ರೈ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮತ್ತು ಪತ್ನಿ ಸುಮ ಅಶೋಕ್ ಕುಮಾರ್ ರೈಯವರನ್ನು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು.
ಬಂಟ ಸ್ಮೃತಿ:
ನಿವೃತ್ತ ತಹಸಿಲ್ದಾರ್ ಚಿಲೆತ್ತಾರು ಕೋಚಣ್ಣ ರೈಯವರ ಬಗ್ಗೆ ಕಲಾರತ್ನ ವಿಶ್ವನಾಥ ಶೆಟ್ಟಿ ನೆಲ್ಯಾಡಿ, ಡಾ.ಮುಂಡಾಳ ತಿಮ್ಮಪ್ಪ ರೈಯವರ ಬಗ್ಗೆ ಕುಂಬ್ರ, ದುರ್ಗಾಪ್ರಸಾದ್ ರೈ ಹಾಗೂ ಎನ್. ಮುತ್ತಪ್ಪ ರೈಯವರ ಬಗ್ಗೆ ನಿರಂಜನ ರೈ ಮಠಂತಬೆಟ್ಟುರವರು ಮಾತನಾಡಿದರು.ಈ ಸಂದರ್ಭದಲ್ಲಿ ಕೋಚಣ್ಣ ರೈ, ಡಾ.ತಿಮ್ಮಪ್ಪ ರೈ ಹಾಗೂ ಮುತ್ತಪ್ಪ ರೈಯವರ ಕುಟುಂಬಸ್ಥರು ಉಪಸ್ಥಿತರಿದ್ದರು. ಯುವ ಬಂಟರ ಸಂಘದಿಂದ ವಿದ್ಯಾನಿಧಿ ವಿತರಣೆ: ಮೂವರು ವಿದ್ಯಾರ್ಥಿನಿಯರ ಕಲಿಕೆಗೆ ಯುವ ಬಂಟರ ಸಂಘದಿಂದ ವಿದ್ಯಾನಿಧಿಯನ್ನು ವಿತರಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ರೈ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ, ತಾಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಂಟರ ಸಂಘದ ನಿರ್ದೇಶಕ ನುಳಿಯಾಲು ರವೀಂದ್ರ ಶೆಟ್ಟಿ, ಮುಂಬೈಯ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಜಯಕರ್ನಾಟಕ
ಸಂಘಟನೆಯ ರಾಜ್ಯ ಮುಖಂಡ ಪ್ರಕಾಶ್ ರೈ ದೇರ್ಲ, ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆ, ತಾಲೂಕು ಬಂಟರ ಸಂಘದ, ಅಧ್ಯಕ್ಷ ಶಶಿಕುಮಾರ್ ರೈ ಬಾಲೊಟ್ಟು ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪಾಧ್ಯಕ್ಷ ಚಿಲೆತ್ತಾರು ಜಿಗಜೀವನ್ ದಾಸ್ ರೈ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಮಾತೃ ಸಂಘದ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಉಪಸ್ಥಿತರಿದ್ದರು.
ಎನ್.ಮುತ್ತಪ್ಪ ರೈಯವರ ಸಹೋದರ ಉದ್ಯಮಿ ಕರುಣಾಕರ್ ರೈ ದೇರ್ಲ ಮತ್ತು ಮನೆಯವರು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದರು.
ಪ್ರಾಯೋಜಕತ್ವ ವಹಿಸಿದ್ದರು. ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು ಸ್ವಾಗತಿಸಿ, ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ- ನೆಲ್ಲಿಕಟ್ಟೆ, ಕಾರ್ಯಕ್ರಮ ಸಂಚಾಲಕರಾದ ಹರ್ಷ ಕುಮಾರ್ ರೈ ಮಾಡಾವು, ಭಾಗ್ಯಶ್ ರೈ ಕೆಯ್ಯರು, ಸಂಯೋಜಕ ರವಿಪ್ರಸಾದ್ ಶೆಟ್ಟಿ ಬನ್ನೂರು, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕ ನವೀನ್ ರೈ ಪಂಜಳ ಮತ್ತು ಧಾರ್ಮಿಕ ಸಂಚಾಲಕ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಕಾಠ್ಯಕ್ರಮ ನಿರೂಪಿಸಿದರು.