ಪುತ್ತೂರು : ಎಸ್‌ಡಿಪಿಐ ಬನ್ನೂರು ವಾರ್ಡ್ ವತಿಯಿಂದ ಅರ್ಹ ಕುಟುಂಬಕ್ಕೆ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ಮನೆಯನ್ನ ಹಸ್ತಾಂತರ ಕಾರ್ಯಕ್ರಮ ಭಾನುವಾರ ಬನ್ನೂರಿನಲ್ಲಿ ನಡೆಯಿತು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನಾದವನಿಗೆ ತಿನ್ನೋಕೆ ಅನ್ನ, ಹಾಕಿಕೊಳ್ಳಲು ಬಟ್ಟೆ ಹಾಗೆಯೇ ಸುಂದರವಾದ ಮನೆ ಇವೆಲ್ಲವೂ ಅತ್ಯಗತ್ಯ. ಹೀಗಿರುವಾಗ ಅದೆಷ್ಟೋ ಜನ ನಮ್ಮ ದೇಶದಲ್ಲಿ ತಿನ್ನಲು ಅನ್ನವಿಲ್ಲದೆ, ಉಳಿದುಕೊಳ್ಳಲು ಮನೆಯಿಲ್ಲದೆ ಕಂಗಾಲಾಗಿದ್ದಾರೆ. ಇದನ್ನು ಗಮನಿಸಿ ಬನ್ನೂರಿನಲ್ಲಿ ಜಮೀಲ ಎಂಬವರು ಕಡು ಬಡತನದಿಂದ ಕೂಡಿದ್ದು, ಅವರನ್ನ ಗುರುತಿಸಿ ಎಸ್‌ಡಿಪಿಐ ಪಕ್ಷ ಹಾಗೂ ಸರ್ವ ದಾನಿಗಳ ಸಹಾಯದಿಂದ ಮನೆಯನ್ನು ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.
ಪುತ್ತೂರು ನಗರಸಭಾ ಸದಸ್ಯೆ ಕೆ.ಫಾತಿಮತ್ ಝೊಹರ ಮನೆಯ ಯಜಮಾನಿ ಜಮೀಲ ಅವರಿಗೆ ಕೀ ಹಸ್ತಾಂತರಿಸಿದರು.
ಎಸ್‌ಡಿಪಿಐ ಬನ್ನೂರು ವಾರ್ಡ್ ಸಮಿತಿ ಅಧ್ಯಕ್ಷ ಮಹಮ್ಮದ್ ಹುಸೇನ್, ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ಮುಖಂಡ ಕೆ ಎ. ಸಿದ್ದಿಕ್, ಎಸ್ ಡಿಪಿಐ ಬನ್ನೂರು ವಾರ್ಡ್ ಕಾರ್ಯದರ್ಶಿ ಮುಸ್ತಫಾ, ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಝರ್ ಬನ್ನೂರು, ಹಮೀದ್ ಸಾಲ್ಮರ, ಅಬ್ದುಲ್ ರಹಿಮಾನ್, ಪಿಬಿಕೆ ಮಹಮ್ಮದ್, ಬನ್ನೂರು ಬದ್ರಿಯಾ ಜುಮ್ಮಾ ಮಸೀದಿ ಕಾರ್ಯದರ್ಶಿ ಅಶ್ರಫ್ ಹಾರಾಡಿ, ರಫೀಕ್ ಬಾಂಬೆ, ಬಾತೀಶ್ ಬಡಕ್ಕೋಡಿ ಸೈಫುದ್ದೀನ್,ಇಫಾಝ್ ಬನ್ನೂರು ಮತ್ತಿತ್ತರರು ಉಪಸ್ಥಿತರಿದ್ದರು.