ಬೆಂಗಳೂರು : ಜು.26 ರ ಮಧ್ಯರಾತ್ರಿ 12 ರಿಂದ ಜು.27 ರ ಮಧ್ಯರಾತ್ರಿ ತನಕ ರಾಜ್ಯಾದ್ಯಂತ ಆಟೋ ಕ್ಯಾಬ್ ಹಾಗೂ ಖಾಸಗಿ ಬಸ್ ಗಳು ಓಡಾಟ ನಡೆಸುವುದಿಲ್ಲ.
ಜು.27 ರಂದು ಆಟೋ ಕ್ಯಾಬ್ ಹಾಗೂ ಖಾಸಗಿ ಬಸ್ ಮಾಲೀಕರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಓಡಾಟ ನಡೆಸುವುದಿಲ್ಲ.
ರಾಜ್ಯ ಸರಕಾರದ ಕೆಲವು ನೀತಿಗಳಿಂದಾಗಿ ಖಾಸಗಿ ಸಾರಿಗೆಗೆ ನಷ್ಟವಾಗುತ್ತಿದೆ. ಈ ಬಗ್ಗೆ ಸರಕಾರವನ್ನು ಎಚ್ಚರಿಸಲು ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಶಕ್ತಿ ಯೋಜನೆ, ವೈಟ್ ಬೋರ್ಡ್ ವಾಹನವನ್ನು ವಾಣಿಜ್ಯ ವಾಹನವಾಗಿ ಬಳಸುತ್ತಿರುವುದು, ದ್ವಿಚಕ್ರ ವಾಹನಗಳಿಗೆ ಮುಕ್ತ ಪರವಾನಿಗೆ ನೀಡುತ್ತಿರುವುದು ಸೇರಿದಂತೆ ಹಲವು ಯೋಜನೆಗಳಿಂದ ಖಾಸಗಿ ಸಾರಿಗೆ ನೆಲಕಚ್ಚಿ ಹೋಗಿದೆ ಎಂದು ಖಾಸಗಿ ಸಾರಿಗೆ ಮಾಲಿಕರು ಆರೋಪಿಸಿದ್ದಾರೆ. ಸರಕಾರದ ಈ ನೀತಿಯಿಂದಾಗಿ ಆಟೋ ಕ್ಯಾಬ್ ಹಾಗೂ ಖಾಸಗಿ ಬಸ್ ಚಾಲಕರು ಸಾಲ, ವಿಮೆ ಕಟ್ಟಲು ಮತ್ತು ಜೀವನ ಸಾಗಿಸಲು ಕಷ್ಟಪಡುವಂತಾಗಿದೆ. ಇದರಿಂದಾಗಿ ರಾಜ್ಯ 23 ಸಾರಿಗೆ ಸಂಘಟನೆಗಳು ಸೇರಿ ಪ್ರತಿಭಟನೆಗೆ ಮುಂದಾಗಿದೆ ಎಂದು ತಿಳಿಸಿದೆ.