ಪುತ್ತೂರು: ಬಪ್ಪಳಿಗೆಯ ಗುರುಂಪುನಾರು ಎಂಬಲ್ಲಿ ವಿಜಯವಾಣಿ ಪತ್ರಿಕೆ ವರದಿಗಾರ ನಿಶಾಂತ್ ಬಿಲ್ಲಂಪದವು ಅವರ ಮೊಬೈಲ್ ಹುಡಿ ಮಾಡಿ ದೌರ್ಜನ್ಯಗೈದ ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಲಾಯಿತು.
ಘಟನೆ ಬಪ್ಪಳಿಗೆಯ ಗುಂಪಕಲ್ಲು ಎಂಬಲ್ಲಿ ನಡೆದಿದ್ದು, ನಿಶಾಂತ್ ಅವರು ಅಪಾಯಕಾರಿ ಮರಗಳನ್ನು ಮಾನದಂಡದ ಪ್ರಕಾರ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿರಲಿಲ್ಲ. ಅಪಾಯಕ್ಕೆ ಆಹ್ವಾನಿಸುವ ರೀತಿಯಲ್ಲಿ ವಿದ್ಯುತ್ ತಂತಿ ಪಕ್ಕ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಕುರಿತು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಲೆ ದುಷ್ಕರ್ಮಿಗಳಿಂದ ದೌರ್ಜನ್ಯಕ್ಕೊಳಗಾಗಿದ್ದರು.
ಈ ಸಂದರ್ಭದಲ್ಲಿ ಸಂಘ ಅಧ್ಯಕ್ಷ ಸಿದ್ದೀಕ್ ನಿರಾಜೆ, ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ, ಉಪಾಧ್ಯಕ್ಷ ಎಂ.ಎಸ್.ಭಟ್, ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ, ಸದಸ್ಯರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.