ಕೊಪ್ಪಳ: ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ಬಂದಾಗಿನಿಂದ ಕೆ.ಎಸ್.ಆರ್.ಟಿಸಿ ಬಸ್‍ಗಳಲ್ಲಿ ಜನವೋ ಜನ. ಕುಳಿತುಕೊಳ್ಳಲು ಸೀಟು ಸಿಗುವುದು ಬಿಡಿ ಕಾಲಿಡಲೂ ಜಾಗವಿಲ್ಲದಷ್ಟು ರಶ್.
ಇದಕ್ಕೆ ಉದಾಹರಣೆ ಎಂಬಂತೆ ವೃದ್ಧೆಯೊಬ್ಬರು ಬಸ್‍ನಲ್ಲಿ ಜಾಗವಿಲ್ಲದೆ ತನ್ನ ಪುಟ್ಟ ಮೊಮ್ಮಗುವಿನೊಂದಿಗೆ ಬಸ್‍ನ ಫುಟ್ ಬೋರ್ಡ್‍ನಲ್ಲಿ ಕುಳಿತು ಪ್ರಯಾಣಿಸಿದ ಘಟನೆ ನಡೆದಿದೆ.
ಕೊಪ್ಪಳದಲ್ಲಿ ಈ ಘಟನೆ ನಡೆದಿದ್ದು ಬಹುತೇಕ ಬಸ್ ಪ್ರಯಾಣಿಕರಿಂದ ಕಿಕ್ಕಿರಿದು ತುಂಬುತ್ತಿದೆ. ಬೇರೆ ಮಾರ್ಗವಿಲ್ಲದೇ ವೃದ್ಧೆ ತನ್ನ ಮೊಮ್ಮಗುವನ್ನು ಕೈಯಲ್ಲಿ ಎತ್ತಿಕೊಂಡು ಬಸ್ ನ ಪುಟ್ ಬೋರ್ಡ್ ಮೇಲೆ ಕುಳಿತು ಸಾಗಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ಪ್ರಯಾಣಿಕರಿಗೆ ಕಿಂಚಿತ್ತಾದರೂ ಮಾನವೀಯತೇ ಬೇಡವೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.