ಪುತ್ತೂರು : ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ “ಶಕ್ತಿ” ಯೋಜನೆ ಆರಂಭಗೊಂಡು ತಿಂಗಳು ಕಳೆದಿದೆ. ಆದರೆ ಸರಕಾರದ ಬೊಕ್ಕಸಕ್ಕೆ ಎಷ್ಟು ಲಾಭ, ನಷ್ಟ ಎಂಬುದು ಈಗಿರುವ ಲೆಕ್ಕಾಚಾರ.
ಮಹಿಳೆಯರ ಉಚಿತ ಬಸ್ ಪ್ರಯಾಣದಿಂದಾಗಿ ಕೆಎಸ್ ಆರ್ ಟಿಸಿ 151.25 ಕೋಟಿ, ಬಿಎಂಟಿಸಿಗೆ 69.56 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆಗೆ 103.51 ಕೋಟಿ ಹಾಗೂ ಕಲ್ಯಾಣ ಸಾರಿಗೆ 77.62 ಕೋಟಿ ರೂಪಾಯಿ ಭರಿಸಬೇಕಿದ್ದು ತಿಂಗಳಲ್ಲಿ 16.73 ಕೋಟಿ ಮಹಿಳೆಯರು ಈ ಯೋಜನೆಯನ್ನು ಪಡೆದುಕೊಂಡಿದ್ದಾರೆ.
ಇದರ ಪರಿಣಾಮ ಬೊಕ್ಕಸಕ್ಕೆ 401.94 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.