ಬೆಂಗಳೂರು: ದಿನದಿಂದ ದಿನಕ್ಕೆ ದಿನಬಳಕೆ ಸಾಮಾಗ್ರಿಗಳ ಜತೆ ತರಕಾರಿ ಬೆಲೆ ಗಗನಕ್ಕೇರಿದ್ದು, ಇನ್ನೊಂದೆಡೆ ಇದೀಗ ಮಾರುಕಟ್ಟೆಯಲ್ಲಿ ಹಸಿಮೀನಿನ ಬೆಲೆ ಗಗನಕ್ಕೇರಿದೆ. ಪರಿಣಾಮ ಜನ ಹೈರಾಣಾಗಿದ್ದಾರೆ.
ಸಾಂಬಾರು ಪದಾರ್ಥಗಳು ಸೇರಿದಂತೆ ಹಣ್ಣು ತರಕಾರಿಗಳ ದುಬಾರಿ ಬೆಲೆಯಿಂದ ಜನರು ಹೈರಾಣಾಗಿದ್ದಾರೆ. ಕೆಲವೆಡೆ ಮಳೆಯ ಅಭಾವದಿಂದ ಇಳುವರಿ ಕಡಿಮೆಯಾದ ಹಿನ್ನೆಲೆ ತರಕಾರಿ, ಹಣ್ಣಿನ ಬೆಲೆ ಹೆಚ್ಚಾಗಿದೆ.
ಜೂನ್-ಜುಲೈ ತಿಂಗಳಿನಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಜೂ.1ರಿಂದ ಜು.30 ರವರೆಗೆ ರಾಜ್ಯ ಸರಕಾರ ಯಾಂತ್ರೀಕೃತ ಮೀನುಗಾರಿಕೆಗೆ ತಡೆಯೊಡ್ಡಿದೆ. ಈ ಎರಡು ತಿಂಗಳುಗಳಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆಯಂತೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ತಾಜಾ ಮೀನುಗಳಿಗೆ ಬೆಲೆ ಹೆಚ್ಚಳವಾಗಿದೆ ಎಂಬುದು ತಜ್ಞರ ಅಭಿಪ್ರಾಯ.