ಪುತ್ತೂರು: ಜುಲೈ 6ರಂದು ಹೈದರಾಬಾದ್ ನ ಗಚಿಬೌಲಿಯಲ್ಲಿ ನಡೆದ 76ನೇ ಪ್ರತಿಷ್ಠಿತ ಸೀನಿಯರ್ ನ್ಯಾಷನಲ್ಸ್ ಅಕ್ವಾಟಿಕ್ ಚಾಂಪಿಯನ್ ಶಿಪ್‌ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿರುವ ಭಾರತೀಯ ನೌಕಾಪಡೆಯ ಈಜುಗಾರ ವೈಷ್ಣವ್ ಹೆಗ್ಡೆಯವರು 50 ಮೀಟರ್ ಬ್ರೆಸ್ಟ್ ಸ್ಟೋಕ್‌ನಲ್ಲಿ 28.8 ಸೆಕೆಂಡುಗಳಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವೈಷ್ಣವ್ ಈ ವರ್ಷದ ಹಿರಿಯ ಸೀನಿಯರ್ಸ್ ರಾಷ್ಟ್ರೀಯ ಪದಕವನ್ನು ಗೆದ್ದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಈಜುಗಾರರೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಗಳಿಸಿದ ದಕ್ಷಿಣ ಕನ್ನಡದ ಏಕೈಕ ಈಜುಗಾರರಾಗಿದ್ದಾರೆ.
ವೈಷ್ಣವ್ ಪುತ್ತೂರಿನ ಡಾ| ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಮತ್ತು ಸೇಂಟ್ ಅಲೋಶಿಯಸ್ ಪೂಲ್ ನಲ್ಲಿ ತರಬೇತುದಾರರಾದ ಪಾರ್ಥವಾರಣಾಶಿ, ನಿರೂಪ್, ದೀಕ್ಷಿತ್ ಹಾಗೂ ರೋಹಿತ್ ಇವರಿಂದ ತರಬೇತಿಯನ್ನು ಪಡೆದಿದ್ದಾರೆ. ಕರುಣಾಕರ್ ಉಪಾಧ್ಯಾಯ ಮತ್ತು ಮಂಜುನಾಥ್ ಅವರಲ್ಲಿ ಯೋಗ ತರಬೇತಿಯನ್ನೂ ಪಡೆಯುತ್ತಿದ್ದಾರೆ.