ವಿಟ್ಲ : ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಕನಸು ಕಾಣಬೇಕು, ನಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ದೊಡ್ಡ ಕನಸು ಕಾಣಬೇಕು. ಗುರಿಯಿಲ್ಲದ ಜೀವನದಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ವಿಟ್ಲ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ದುಡ್ಡಿದ್ದವ ಮಾತ್ರ ಯಶಸ್ಸು ಕಾಣುತ್ತಾನೆ ಎಂಬ ಮನೋಭಾವ ಬಿಟ್ಟು ಬಿಡಬೇಕು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇಂಗ್ಲೀಷ್ ಮತ್ತು ಹಿಂದಿ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಜೀವನದಲ್ಲಿ ಶಿಸ್ತು ಮುಖ್ಯವೇ ವಿನ ಹಣವಲ್ಲ. ಕೇವಲ ಹಣ ಇದ್ದ ಮಾತ್ರಕ್ಕೆ ಸಂಪಾದನೆ ಮಾಡಲು ಸಾಧ್ಯವಿಲ್ಲ. ಸಂಸ್ಕಾರ ಮತ್ತು ಒಳ್ಳೆಯ ತನ ನಮ್ಮಲ್ಲಿರಬೇಕಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾಂಶುಪಾಲ ಪದ್ಮನಾಭ, ಅರ್ಥ ಶಾಸ್ತ್ರಜ್ಞ ಪ್ರೊ.ಶಾಂತರಾಮ , ನಿವೃತ್ತ ಉಪನ್ಯಾಸಕಿ ಪ್ರೊ.ಚಕ್ರೇಶ್ವರಿ , ವಿದ್ಯಾರ್ಥಿ ಕ್ಷೇಮಪಾಲಕಿ ಸುಜಾತಾ, ಆಂತರಿಕ ಗುಣಮಟ್ಟ ಪರೀಕ್ಷ ಸಂಚಾಲಕಿ ಪರಮೇಶ್ವರಿ, ಸ್ನಾತಕೋಸ್ಕರ ಸಂಘದ ಕಾರ್ಯದರ್ಶಿ ಹರ್ಷಿತಾ, ದೀಪಿಕಾ, ಮನುಶ್ರೀ,ಗೀತಿಕಾ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಸೌಮ್ಯಾ ಎಚ್ ಸ್ವಾಗತಿಸಿದರು. ಉಪನ್ಯಾಸಕ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ,ಪೋಷಕ ಹಾಗೂ ವಿದ್ಯಾರ್ಥಿಗಳ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು.