ಸುಳ್ಯ: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ 22ನೇ ನೂತನ ಸೋಮಂತಡ್ಕ ಶಾಖೆಯ ಉದ್ಘಾಟನಾ ಸಮಾರಂಭ ಜು.9 ಭಾನುವಾರ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೋಮಂತಡ್ಕದಲ್ಲಿರುವ ಡಿಸೋಜಾ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಶ್ರೀ ವೆಂಕಟರಮಣ ಟವರ್ಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೊಸೈಟಿ ಸತತ ಮೂರು ಬಾರಿ ಕರ್ನಾಟಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾಗಿದೆ.
ಸಂಘದ ಅಧ್ಯಕ್ಷರಾಗಿ ಪಿ.ಸಿ.ಜಯರಾಮ, ಉಪಾಧ್ಯಕ್ಷರಾಗಿ ಮೋಹನ್ ರಾಂ ಸುಳ್ಳಿ, ನಿರ್ದೇಶಕರುಗಳಾಗಿ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಚಂದ್ರಾ ಕೋಲ್ಚಾರ್, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್., ಜಯಲಲಿತ ಕೆ.ಎಸ್, ನಳಿನಿ ಸೂರಯ್ಯ, ಲತಾ ಎಸ್.ಮಾವಜಿ, ಹೇಮಚಂದ್ರ ಐ.ಕೆ., ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜೆ.ವಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ಟಿ.ವಿಶ್ವನಾಥ ಸಂಸ್ಥೆಯ ಬೆಳವಣಿಗೆಯಲ್ಲಿ ಶ್ರಮಿಸುತ್ತಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಶಾಖೆಯ ಕಚೇರಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಲಿದ್ದು, ಸುಳ್ಯ ಶ್ರೀ ವೆಂಕಟರಮಣ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಭದ್ರತಾ ಕೊಠಡಿ, ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ. ಗಣಕೀಕರಣ ಉದ್ಘಾಟಿಸುವರು. ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜನಿ ಪ್ರಥಮ ಪಾಲು ಪತ್ರ ವಿತರಣೆ, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಪೋಷಕಿ ಲೋಕೇಶ್ವರಿ ವಿನಯಚಂದ್ರ ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆ, ಬೆಳ್ತಂಗಡಿ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪಿ.ತಿಮ್ಮಪ್ಪ ಗೌಡ ಬೆಳಾಲು ಪ್ರಥಮ ಠೇವಣಿ ಪತ್ರ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೆರೈನ್ ನಿವೃತ್ತ ಮುಖ್ಯ ಅಭಿಯಂತರ ಡಿ.ಯಂ.ಗೌಡ, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ತಜ್ಞ ಡಾ.ಚಂದ್ರಕಾಂತ್, ಮುಂಡಾಜೆ ಸೋಮಂತಡ್ಕ ಡಿಸೋಜಾ ಕಾಂಪ್ಲೆಕ್ಸ್ ಮಾಲಕ ಹೆನ್ರಿ ಡಿಸೋಜಾ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.