ದ.ಕ.-ಉಡುಪಿಯಲ್ಲಿ ಮುಂದುವರಿದ ಮಳೆ | ಮಳೆಗೆ ಸಂಬಂಧಿಸಿ ಎರಡು ಸಾವು ಪ್ರಕರಣ ದಾಖಲು

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಗುರುವಾರ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿಯಲ್ಲಿ ಬುಧವಾರವೂ ಮುಂದುವರೆದ ಮಹಾ ಮಳೆಗೆ ಸಂಬಂಧಿಸಿದ ಎರಡು ಸಾವುಗಳು ದಾಖಲಾಗಿವೆ.

ಈ ಮೂಲಕ ಕರಾವಳಿ ಕರ್ನಾಟಕದಲ್ಲಿ ಮಹಾ ಮಳೆಗೆ ಒಟ್ಟು ನಾಲ್ಕು ಬಲಿಯಾಗಿವೆ. ಮಳೆ ಕೊರತೆ ಅನುಭವಿಸುತ್ತಿದ್ದ ಬಾಕಿ ತೀರಿಸಲೋ ಏನೊ ಎಂಬಂತೆ ಭಾರೀ ಮಳೆಯಾಗುತ್ತಿದೆ.

ನಿನ್ನೆ ಪೇಂಟಿಂಗ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿಯವರು ತೋಡು ದಾಟುತ್ತಿರುವಾಗ ಕಾಲು ಜಾರಿ ಮೋರಿಗೆ ಬಿದ್ದು ಸಾವನ್ನಪ್ಪಿದ್ದರು. ಇನ್ನೊಬ್ಬ ಯುವಕ ಇಂದು ಮಳೆಯಿಂದಾಗಿ ಬಿದ್ದ ವಿದ್ಯುತ್ ಪ್ರವಹಿಸಿ ತೀರಿಕೊಂಡಿದ್ದರು. ನಿನ್ನೆ ರಾತ್ರಿಯ ಹೊತ್ತು, ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.



































 
 

ಹೋಟೆಲ್ ಕೆಲಸ ಮಾಡುವ ದಿವಾಕರ್‌ ಶೆಟ್ಟಿ ಎನ್ನುವವರು ತಮ್ಮ ಹೋಟೆಲ್ ಕೆಲಸ ಮುಗಿಸಿ ತೆಕ್ಕಟ್ಟೆ ಎಂಬಲ್ಲಿಯ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಸ್ಕಿಡ್ ಆಗಿ ಕೆರೆಗೆ ಉರುಳಿ ಮೃತಪಟ್ಟಿದ್ದಾರೆ. ದುರದೃಷ್ಟವಶಾತ್ ಇದೀಗ ಮೃತ ದಿವಾಕರ್‌ ಕೀಲು ನೋವಿನಿಂದ ಬಳಲುತ್ತಿದ್ದ ನೋವು ಇದ್ದ ಕಾರಣ ಏಳಲಾಗದೆ ಮೃತಪಟ್ಟಿದ್ದಾರೆ. ತಡರಾತ್ರಿ ಘಟನಾ ಸ್ಥಳಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.

ಮತ್ತೊಂದೆಡೆ ಉಡುಪಿಯಲ್ಲಿ ದೇವಸ್ಥಾನದಿಂದ ವಾಪಸ್ ಬರುತ್ತಿದ್ದ 75 ವರ್ಷದ ಶೇಷಾದ್ರಿ ಐತಾಳ್ ಎಂಬುವರು ಕುಬ್ಜಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯ ಈಜು ಪಟು ಮಂಜುನಾಥ್ ನಾಯಕ್ ನೆರವಿನಿಂದ ಶವವನ್ನು ಮೇಲಕ್ಕೆತ್ತಲಾಗಿದೆ.

ಅಷ್ಟೇ ಅಲ್ಲದೆ ಕರಾವಳಿಯಾದ್ಯಂತ ಹಲವು ಕಡೆ ಸಂಭವನೀಯ ಅಪಘಾತಗಳು ನಡೆದಿದೆ. ನೇತ್ರಾವತಿ ನದಿಯಲ್ಲಿ ಮೀನುಗಾರಿಕೆಗೆ ಬೋಟ್‌ನಲ್ಲಿ ಹೋಗಿದ್ದ ಯುವಕನನ್ನು ಸಿನಿಮೀಯವಾಗಿ ರಕ್ಷಿಸಲಾಗಿದೆ. ಬೋಟ್ ಮಾಗಿಚಿದ ಸಂದರ್ಭ ಸ್ಥಳೀಯ ಯುವಕರ ತಂಡವು ರಕ್ಷಣೆ ಮಾಡಿದ್ದಾರೆ. ಹಲವು ಕಡೆ ಗುಡ್ಡ ಕುಸಿತ, ರಸ್ತೆಯಲ್ಲಿ ನೀರು ಬ್ಲಾಕ್ ಆಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಹವಾಮಾನ ಇಲಾಖೆಯ ಉಡುಪಿಯಲ್ಲಿ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಈ ಮಳೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಬಿದ್ದ ನೀರಾಗಿದ್ದು, ಅದು ಸುತ್ತಲ ತಪ್ಪಲು ಪ್ರದೇಶವಾದ ಹೆಬ್ರಿ ಮೊದಲ್ಗೊಂಡು ಕಾರ್ಕಳದಲ್ಲಿ ಹರಿದು ಸುರಿದ ಭಾರೀ ಮಳೆಯಿಂದ ಅಲ್ಲಿನ ಸ್ವರ್ಣ ನದಿ ವಿರಾಟ್ ರೂಪವನ್ನು ಪಡೆದುಕೊಂಡಿದೆ. ಇತ್ತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಲ್ಲುವಷ್ಟು ಮಳೆಯಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top