ಚೆನ್ನೈ: ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಕೆಲವು ದಿನಗಳಿಂದ ಟೊಮ್ಯಾಟೊ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಇದೀಗ ಹಸಿ ಮೆಣಸಿನಕಾಯಿಯ ಬೆಲೆ ಕೂಡಾ ಹೆಚ್ಚಾಗಿದೆ.
ದೇಶದ ಕೆಲವು ಭಾಗಗಳಲ್ಲಿ ಹಸಿರು ಮೆಣಸಿನಕಾಯಿ ಮತ್ತು ಶುಂಠಿಯ ಬೆಲೆಗಳು ಪ್ರತಿ ಕೆಜಿಗೆ ಸುಮಾರು 400 ರೂ. ಕ್ಕೆ ಏರಿದೆ. ಹಸಿರು ಮೆಣಸಿನಕಾಯಿ ಚೆನ್ನೈನಲ್ಲಿ ಪ್ರತಿ ಕೆಜಿಗೆ 100 ರೂ. ಕ್ಕೆ ಮಾರಾಟವಾಗಿದೆ.
ಅಡುಗೆ ಉತ್ಪನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೂರೈಕೆಯಲ್ಲಿನ ಕುಸಿತವೇ ಬೆಲೆ ಏರಿಕೆಗೆ ಕಾರಣವಾಗಿದೆ.