ಪುತ್ತೂರು : ಧರ್ಮ ಆಧಾರಿತ ರಾಜಕಾರಣ ಇರಬೇಕೆಂಬ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ಹಮ್ಮಿಕೊಂಡ ಧಾರ್ಮಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಕೇಶವ ಮಚ್ಚಿಮಲೆ ನೇತೃತ್ವದಲ್ಲಿ ರಚನೆಗೊಂಡ ನೂತನ ನಾಟಕ ತಂಡ “ಅಭಿನಯ ಕಲಾ ತಂಡ”ವನ್ನು ಉದ್ಘಾಟಿಸುವುದರ ಜತೆಗೆ ನಿಗೂಢಮಯ ನಾಟಕ “ಮಣ್ಣ್ ಕಾರ್ನಿಕದ” ಕ್ಕೆ ಮುಹೂರ್ತ ಮಾಡಲಾಯಿತು. ಕ್ಷೇತ್ರದ ಧರ್ಮದರ್ಶಿ ಪ್ರೀತಂ ಪುತ್ತೂರಾಯ ನಾಟಕದ ಪೋಸ್ಟರ್ ಬಿಡುಗಡೆಗೊಳಿಸಿದರು. ನೂತನ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಅರುಣ್ ಕುಮಾರ್ ಪುತ್ತಿಲ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಮಂಜಪ್ಪ ರೈ ಬಾರಿಕೆ, ಶನೈಶ್ಚರ ಪೂಜಾ ಸಮಿತಿ ಅಧ್ಯಕ್ಷ ಉಮೇಶ್ ಆಚಾರ್ಯ ಕುಕ್ಕಾಡಿ, ಕಾರ್ಯದರ್ಶಿ ಮೋಹನ್ ಸಿಂಹವನ, ಖಜಾಂಚಿ ಸತೀಶ್ ಕುಲಾಲ್ ಉಪಸ್ಥಿತರಿದ್ದರು. ಪ್ರಣಮ್ಯ ಪುತ್ತೂರಾಯ ಪ್ರಾರ್ಥಿಸಿದರು. ರಾಜೇಶ್ ಬನ್ನೂರು ಸ್ವಾಗತಿಸಿದರು/ ಜಯಂತ ಕಂಬಲತ್ತಡ್ಡ ವಂದಿಸಿದರು. ಉದಯ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಉದ್ಯಮಿ ಗೋಪಾಲಕೃಷ್ಣ ಹೇರಳೆ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು.