ನವದೆಹಲಿ: ಅಂಬಾನಿ ಕುಟುಂಬದ ಮೂರನೇ ತಲೆಮಾರು ಎನಿಸಿಕೊಂಡಿರುವ ಆಕಾಶ್ ಅಂಬಾನಿ ಅಂದರೆ ಮುಖೇಶ್ ಅಂಬಾನಿಯವರ ಪುತ್ರ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಎಚ್.ಡಿ.ಎಫ್.ಸಿ ಬ್ಯಾಂಕ್ ಹಾಗೂ ಬಜಾಜ್ ಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಯಿದೆ.
ಹಾಗಿದ್ದರೆ ಆಕಾಶ್ ಅಂಬಾನಿಯ ಹೊಸ ಉದ್ಯಮ ಯಾವುದು.
ಭಾರತೀಯ ಉದ್ಯಮ ಕ್ಷೇತ್ರದ ಅಗ್ರಜ ಎನಿಸಿಕೊಂಡಿರುವ ಮುಖೇಶ್ ಅಂಬಾನಿಯವರ ಹಿರಿಯ ಮಗ ಆಕಾಶ್ ಅಂಬಾನಿ ಹೊಸ ಉದ್ಯಮ ಆರಂಭಿಸಿಲಿದ್ದು. ಇದೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವರದಿಗಳ ಪ್ರಕಾರ, ಆಕಾಶ್ ಕನ್ಸ್ಯೂಮರ್ ಫೈನಾನ್ಸ್ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನೊಂದಿಗೆ ಗ್ರಾಹಕ ಹಣಕಾಸು ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧಾರ ಮಾಡಿದ್ದಾರಂತೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಕೆಲವು ರಿಲಯನ್ಸ್ ಡಿಜಿಟಲ್‌ನ ಪ್ರಾದೇಶಿಕ ಕಚೇರಿಗಳಲ್ಲಿ ಆರಂಭಿಸಲು ಆಕಾಶ್ ಇಚ್ಚಿಸಿದ್ದು, ಇದೇ ವರ್ಷ ಉದ್ಯಮ ಆರಂಭವಾಗಲಿದೆ.
ಈಗಾಗಲೇ ಮುಖೇಶ್ ಅಂಬಾನಿ ಚೇರ್ಮನ್ ಸ್ಥಾನವನ್ನು ಪುತ್ರ ಆಕಾಶ್ ಅಂಬಾನಿಗೆ ಹಸ್ತಾಂತರಿಸಿದ್ದಾರೆ. ಈ ನಡುವೆ ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆ ಮಾಡೆಲ್ ಎಕನಾಮಿಕ್ ಟೌನ್‌ಶಿಪ್ ಲಿಮಿಟೆಡ್ ಅಥವಾ ಎಂಇಟಿ ಸಿಟಿಯನ್ನು ಪ್ರಸ್ತುತ ರಾಷ್ಟ್ರ ರಾಜಧಾನಿ ಪ್ರದೇಶದ ಬಳಿ ನಿರ್ಮಾಣ ಮಾಡುತ್ತಿದೆ. ಈ ಹಿಂದಿಗಿಂತಲೂ ಹೆಚ್ಚು ವಿಶ್ವದರ್ಜೆಯ ಸ್ಮಾರ್ಟ್ ಸಿಟಿಯನ್ನು ನಿರ್ಮಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.