ನರಿಮೊಗರು : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗೆ ಎಡನೀರು ಶಂಕರಾಚಾರ್ಯ ಪೀಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿಯವರು ಜೂ.29ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ಚನ ನೀಡಿದ ಶ್ರೀಗಳು, ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಹೊಂದಬೇಕು. ಇಂದಿನ ಶಿಕ್ಷಣವು ರಾಜಕೀಯಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಹಿಂದಿನ ಕಾಲದಲ್ಲಿ ಶಿಕ್ಷಣವು ಪುರಾಣಗಳನ್ನು ಸಂಬಂಧಿಸಿದ ಪಠ್ಯಕ್ರಮವಿತ್ತು. ಮನುಷ್ಯ ನಾಗಿ ಹುಟ್ಟುವುದು, ಉತ್ತಮ ಶಿಕ್ಷಣ, ವಿನಯ ದಿಂದ ಕೂಡಿದ ಜೀವನ ಪಡೆಯುವುದು ತುಂಬಾ ಸೌಭಾಗ್ಯಯುತವಾದುದು,ಎಲ್ಲರೂ ಸಂಸ್ಕಾರವನ್ನು ಬೆಳೆಸಿ ಉಳಿಸಿ ಉತ್ತಮ ಪ್ರಜೆಯಾಗಿ ಬಾಳಿ ಎಂದರು.
ಶಿಶುಮಂದಿರದ ಮಕ್ಕಳು ಭಜನೆಯ ಮೂಲಕ ಸ್ವಾಮೀಜಿಯವರನ್ನು ಸ್ವಾಗತಿಸಿದರು. ಸ್ವಾಮೀಜಿಗಳು ಪುಟಾಣಿಗಳೊಂದಿಗೆ ತಮ್ಮ ಅಮೂಲ್ಯ ಸಮಯ ಕಳೆದರು.
ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು,ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ,ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣ ಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಪುತ್ತೂರಾಯ, ಅಶೋಕ್ ಕುಮಾರ್ ಪುತ್ತಿಲ, ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ,ಶಿಕ್ಷಕ-ಶಿಕ್ಷಕೇತರ ವೃಂದ ಮಕ್ಕಳು ಉಪಸ್ಥಿತರಿದ್ದರು.