ಗೃಹಲಕ್ಷ್ಮೀ ಯೋಜನೆ ಜ್ಯಾರಿಗೆ ತರಲು ಮುಹೂರ್ತ ಫಿಕ್ಸ್ | ಸೈಬರ್ ವಂಚಕರಿಂದ ನಕಲಿ ಆ್ಯಪ್​ಗಳ ಸೃಷ್ಟಿ | ಎಚ್ಚೆತ್ತುಕೊಳ್ಳಬೇಕಾಗಿದೆ ಜನತೆ

ಬೆಂಗಳೂರು : ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 16 ರಿಂದ ಅನುಷ್ಠಾನಗೊಳಿಸುವ ಸಿದ್ಧತೆಯಲ್ಲಿದ್ದು, ಇದಕ್ಕಾಗಿ ಪ್ರತ್ಯೇಕ ಆ್ಯಪ್​ ಕೂಡ ಸಿದ್ಧಪಡಿಸಲಾಗಿದೆ. ಈ ನಡುವೆ ಗೂಗಲ್​ ಪ್ಲೇಸ್ಟೋರ್​ನಲ್ಲಿ ಗೃಹಲಕ್ಷ್ಮೀ ಯೋಜನೆಯ ಹೆಸರಿಯಲ್ಲಿ ಮೂರು ನಕಲಿ ಆ್ಯಪ್​ಗಳ ಸೃಷ್ಟಿಯಾಗಿದ್ದು ಸೈಬರ್​ ಕ್ರೈಂ ಅಪಾಯ ಹೆಚ್ಚಾಗಿದೆ.

ಥೇಟ್​ ಸರ್ಕಾರಿ ಆ್ಯಪ್​ನಂತೆಯೇ ಕಾಣುವಂತಹ ಮೂರು ನಕಲಿ ಗೃಹಲಕ್ಷ್ಮೀ ಅಪ್ಲಿಕೇಶನ್​ ಗೂಗಲ್​ ಪ್ಲೇಸ್ಟೋರ್​ನಲ್ಲಿ ಡೌನ್​ಲೋಡ್​ ಆಗ್ತಿದೆ. ಇದೊಂದು ನಕಲಿ ಆ್ಯಪ್​ ಎಂಬ ಅರಿವಿರದ ಅನೇಕರು ಈ ಆ್ಯಪ್‍ ಗಳನ್ನು ಡೌನ್​ಲೋಡ್​ ಮಾಡಿ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನಾ ಆ್ಯಪ್​, ಗೃಹಲಕ್ಷ್ಮೀ ಸ್ಕೀಮ್​ ಹಾಗೂ ಗೃಹಲಕ್ಷ್ಮೀ ಅಪ್ಲಿಕೇಶನ್​ ಎಂಬ ಮೂರು ಆಪ್ಲಿಕೇಶನ್​ಗಳು ಕಾಣಿಸಿವೆ.

ಈ ಆ್ಯಪ್​ನ ಮೂಲಕ ಸೈಬರ್​ ವಂಚಕರು ಜನರ ಆಧಾರ್ ಡಿಟೈಲ್ಸ್​ ಹಾಗೂ ಬ್ಯಾಂಕ್​ನ ವಿವರ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ವೈಯಕ್ತಿಕ ದಾಖಲೆಯನ್ನೇ ಬಳಕೆ ಮಾಡಿಕೊಂಡು ಬ್ಯಾಂಕ್​ನಲ್ಲಿರುವ ಹಣವನ್ನು ಲೂಟಿ ಮಾಡುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಜನತೆ ಎಚ್ಚರಿಕೆ ವಹಿಸಬೇಕಾಗಿದೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top