ಪುತ್ತೂರು: ದ.ಕ.ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದ.ಕ.ಜಿಲ್ಲಾ ಸಮಿತಿ ಸಹಾಯಕ ಆಯುಕ್ತರ ಮೂಲಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದೆ.
ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಜೂ.20 ರ ಒಳಗಡೆ ರೈತರಿಗೆ ಹೆಕ್ಟೇರಿಗೆ 6400 ರೂ. ಕಟ್ಟಲು ಸೂಚನೆ ಬರುತ್ತಿದ್ದು, ಈ ಬಾರಿ ಜೂ.25 ಕಳೆದರೂ ಸಂಬಂಧ ಪಟ್ಟ ಇಲಾಖೆ ಯಾವುದೇ ಸೂಚನೆಯನ್ನು ಇಲ್ಲಿಯತನಕ ನೀಡಿಲ್ಲ.
ತಕ್ಷಣ ಸಂಬಂಧ ಪಟ್ಟ ಇಲಾಖೆಗೆ ಬರಪೀಡಿತ ಜಿಲ್ಲೆ ಎಂದು ಘೊಷಣೆ ಮಾಡುವ ಆದೇಶ ನೀಡಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ಬೈಲುಗುತ್ತು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ಪ್ರಖರತೆ 40 ಡಿಗ್ರಿ ಸೆಲ್ಸಿಯಷ್ಟಿದ್ದು, ತೆಂಗು, ಬಾಳೆ, ಕಾಳುಮೆಣಸು, ಫಲವಸ್ತುಗಳು, ತರಕಾರಿ, ಅಡಿಕೆ ಫಸಲುಗಳೇ ನಾಶವಾಗಿವೆ. ಜತೆಗೆ ಮಳೆ ಕೂಡಾ ಈ ಬಾರಿ ಸಕಾಲಕ್ಕೆ ಬಂದಿಲ್ಲ. ಹವಮಾನ ಇಲಾಖೆ ಶೇ.60 ಮಳೆ ಪ್ರಮಾಣ ಕಡಿಮೆ ಎಂದು ತಿಳಿಸಿದೆ.