ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳದ ಮೂರು ವರ್ಷಗಳ ಹಿಂದೆ ಆರಂಭಿಸಿದ ಹಡಿಲು ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ದೇವಸ್ಥಾನದ ಸುಮಾರು ಎರಡು ಎಕ್ರೆ ಜಾಗದಲ್ಲಿ ಏಣೇಲು ಬೇಸಾಯಕ್ಕೆ ಶಾಸಕ ಅಶೋಕ್ ಕುಮಾರ್ ರೈ ಬೀಜ ಬಿತ್ತುವ ಮೂಲಕ ಚಾಲನೆ ನೀಡಿದರು.
2021 ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಯೋಜನೆಯಂತೆ ತಾಲೂಕಿನಲ್ಲಿ ಹಲವು ದೇವಸ್ಥಾನಗಳ ಗದ್ದೆ ಸೇರಿದಂತೆ ಇನ್ನಿತರ ಹಡಿಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯುವ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಈ ರೀತಿ ಬೆಳೆದ ಭತ್ತವನ್ನು ದೇವಸ್ಥಾನದ ಉಪಯೋಗಕ್ಕೆ ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನ ಹಲವು ದೇವಸ್ಥಾನಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ ನಡೆಯುತ್ತಾ ಬಂದಿದೆ.
ಟ್ಯಾಕ್ಟ್ ರ್ ಮೂಲಕ ಗದ್ದೆ ಉಳಮೆ ಮಾಡಿ, ಬೀಜ ಬಿತ್ತುವ ಮೂಲಕ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಈ ವರ್ಷ ಬೀಜ ಬಿತ್ತನೆ ಮಾಡಿಬೇಕೆಂಬ ಆಶಯವನ್ನು ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ದೇವಸ್ಥಾನದ ಎರಡು ಎಕ್ರೆ ಜಾಗದಲ್ಲಿ ಬೀಜ ಬಿತ್ತುವ ಮೂಲಕ ಇದೀಗ ಚಾಲನೆ ನೀಡಿದ್ದೇವೆ. ಕಳೆದ ವರ್ಷ ಸುಮಾರು 16 ಕ್ವಿಂಟಾಲ್ ಅಕ್ಕಿಯನ್ನು ಪಡೆಯುವ ಕೆಲಸ ಆಗಿದೆ ಎಂದ ಅವರು, ತಾಲೂಕಿನಲ್ಲಿ ಅದೆಷ್ಟೋ ಹಡಿಲು ಬಿದ್ದ ಜಮೀನು ಇದೆ. ಕಳೆದ ಬಾರಿಯಂತೆ ಎಲ್ಲಾ ಕಡೆಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ ಗೌಡ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.