ಸುಳ್ಯ: ಸುಳ್ಯದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ಮೂಲಭೂತ ಸೌಲಭ್ಯಗಳ ಪೂರೈಕೆಗಾಗಿ ಸುಮಾರು 4 ಕೋಟಿ ರೂಪಾಯಿ ಅನುದಾನ ಬಂದಿದ್ದು ಈ ಅನುದಾನ ಬಳಸಿ ನಡೆಯುತ್ತಿರುವ ಡಯಾಲಿಸಿಸ್ ಸೆಂಟರ್ ಆಧುನಿಕರಣ, ಹೊಸ ಲ್ಯಾಬೊರೇಟರಿ ಕಟ್ಟಡ, ತುರ್ತು ಚಿಕಿತ್ಸೆ ಘಟಕದ ವಿಸ್ತರಣೆ, ನೂತನ ಶವಗಾರ ಇತ್ಯಾದಿ ಕಾಮಗಾರಿಗಳನ್ನು ವೀಕ್ಷಿಸಿದರು.
ಈಗಾಗಲೇ ಪೂರ್ಣಗೊಂಡಿರುವ ಸಂಪೂರ್ಣ ಹವಾನಿಯಂತ್ರಿತ ತೀವ್ರನಿಗಾ ಘಟಕ ವೀಕ್ಷಿಸಿ ಇಲ್ಲಿ ಬಾಕಿ ಇರುವ ಬೆಡ್ ಗಳ ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಡಯಾಲಿಸಿಸ್ ಸೆಂಟರ್ ಗೆ ಬೆಂಗಳೂರಿನ ಖಾಸಗಿ ಸಂಸ್ಥೆಯಿಂದ ಇನ್ನು 2 ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳನ್ನು ಪೂರೈಸಲು ಮಾತುಕತೆ ನಡೆಸಿದ್ದು, ನೂತನ ಡಯಾಲಿಸಿಸ್ ಸೆಂಟರ್ ಸಿದ್ಧಗೊಂಡ ತಕ್ಷಣ ಇವುಗಳನ್ನು ಪೋರೈಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಸುಳ್ಯ ಸರ್ಕಾರಿ ಆಸ್ಪತ್ರೆಯ ಆಡಳಿತಧಿಕಾರಿ ಡಾ. ಕೆ ವಿ ಕರುಣಾಕರ, ನರ್ಸಿಂಗ್ ಆಫೀಸರ್ ಹರೀಣಾಕ್ಷಿ ಯು ಪಿ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ನಪಂ. ಸದಸ್ಯರಾದ ಬುದ್ಧ ನಾಯ್ಕ, ಕಿಶೋರಿ ಶೇಟ್, ಪ್ರಮುಖರಾದ ಮಹೇಶ್ ರೈ ಮೇನಾಲ, ಹರೀಶ್ ರೈ ಉಬರಡ್ಕ, ಶಾಂತರಾಮ ಕಣಿಲೆಗುಂಡಿ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.