ಪುತ್ತೂರು: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕಿನ ಕೆದಂಬಾಡಿ ವಲಯದ ಪರಿಸರ ಮಾಹಿತಿ ಕಾರ್ಯಕ್ರಮ, ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಇಕೋ ಕ್ಲಬ್ ವನಶ್ರೀ ಇಕೋ ಕ್ಲಬ್ ಸಂಯೋಗದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು.
ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಯ್ಯೂರು ಗ್ರಾಪಂ ಅಧ್ಯಕ್ಷೆ ಜಯಂತಿ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಪಿ, ಕಾರ್ಯಪ್ಪ, ಕೆಯ್ಯೂರು ಕೆಪಿಎಸ್ ಶಾಲಾ ಪ್ರಾಂಶುಪಾಲೆ ಸೌಮ್ಯ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇದಂಬಾಡಿ ವಲಯ ಮೇಲ್ವಿಚಾರಕಿ ಶುಭಾವತಿ, ಮುಖ್ಯಗುರು ಬಾಬು ಎಂ, ಗ್ರಾಪಂ ಸದಸ್ಯರಾದ ಜಯಂತಿ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ ರೈ ಪಾಲ್ಗೊಂಡಿದ್ದರು.
ಉಪ ವಲಯ ಅಧಿಕಾರಿ ಪ್ರಕಾಶ್ ಬಿ, ಜೆ, ಉಪವಲಯ ಅರಣ್ಯ ಅಧಿಕಾರಿ ಪ್ರಸಾದ್ ಕೆಜಿ, ಉಪಸ್ಥಿತರಿದ್ದರು
ಕೃಷಿ ಮೇಲ್ವಿಚಾರಕ ಉಮೇಶ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ 50 ಗಿಡ ಗಳನ್ನು ನಾಟಿ ಮಾಡಿ, ಶಾಲಾ ಮಕ್ಕಳಿಗೆ ಗಿಡ ವಿತರಣೆಯನ್ನು ಮಾಡಲಾಯಿತು
ಶಿಕ್ಷಕಿ ನಳಿನಿ ಸ್ವಾಗತಿಸಿ, ಜೆಸ್ಸಿ ಪಿ.ವಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ, ಗಸ್ತು ಅರಣ್ಯ ಪಾಲಕ ಚಿದಾನಂದ ಬಿ. ವಂದಿಸಿದರು.