ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣವಾಗುತ್ತಿರುವ ಕೆಎಂಎಫ್ ಮಿನಿ ಡೈರಿ ಯೋಜನೆಗಾಗಿ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆಯಿತು.
ಸುಮಾರು 15 ಎಕ್ರೆ ವಿಸ್ತೀರ್ಣದಲ್ಲಿ ನೆಲೆನಿಲ್ಲಿರುವ ಕೆಎಂಎಫ್ ಮಿನಿ ಡೈರಿ ನಿರ್ಮಾಣಕ್ಕಾಗಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಬೇಕಿದೆ. ಆರ್ಯಾಪು ಗ್ರಾಮ ವ್ಯಾಪ್ತಿಯ ಕುರಿಯ, ದಾರಂದಕುಕ್ಕು, ಬನ್ನೂರು ಸೇರಿದಂತೆ ಕೆಲವು ಕಡೆಗಳಲ್ಲಿ ಸ್ಥಳಗಳ ಪರಿಶೀಲನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ತಹಶಿಲ್ದಾರ್ ಶಿವಶಂಕರ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಎಸ್ ಬಿ ಜಯರಾಮ ರೈ, ನಿರ್ದೇಶಕ ನಾರಾಯಣ ಪ್ರಕಾಶ್ ಪಾಣಾಜೆ, ಸುದಾಕರ್ ರೈ, ಮೆನಜರ್ ರವಿರಾಜ್ ಉಡುಪ, ಸಹಾಯಕ ವ್ಯವಸ್ಥಾಪಕ ಡಾ. ಸತೀಶ್ ರಾವ್ ಮತ್ತು ಪುತ್ತೂರು ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಗೆ ಬುತ್ತಿ ಊಟ ತಂದು ಸವಿದ ಶಾಸಕರು :
ಮಂಗಳವಾರ ಕೆಎಂಎಫ್ ಕುರಿತು ಸಭೆಯೊಂದನ್ನು ಮಂಗಳವಾರ ಪ್ರವಾಸಿ ಬಂಗಲೆಯಲ್ಲಿ ಕರೆಲಾಗಿತ್ತು. ಸಭೆ ಮುಗಿದ ಬಳಿಕ ಶಾಸಕರಲ್ಲಿ ಊರ ಮಾಡಲು ಅಧಿಕಾರಿಗಳು ಹೇಳಿದಾಗ ನಾನು ಬುತ್ತಿ ಊಟ ತಂದಿದ್ದೇನೆ. ಅದನ್ನೇ ಮಾಡುತ್ತೇನೆ ಎಂದು ಬುತ್ತಿ ತೆರೆದು ಮೀನು ಫ್ರೈಯನನು ಇತರರಿಗೂ ಹಂಚಿ ತಿಂದರು.