ಸವಣೂರು: ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಅವಘಡಗಳಿಗೆ ಸೂಕ್ತ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಸವಣೂರು ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜೂ.20ರಂದು ನಡೆಯಿತು.
ಮಳೆಯ ಸಂದರ್ಭದಲ್ಲಿ ಅಪಾಯ ಉಂಟಾಗುವ ಸಾಧ್ಯತೆಯಿರುವ ಸ್ಥಳಗಳನ್ನು ಗುರುತಿಸಿ ಅಗತ್ಯ ಕ್ರಮಕೈಗೊಳ್ಳುವಂತೆಯೂ ಚರ್ಚಿಸಲಾಯಿತು.
ಆರೇಲ್ತಡಿ ಶಾಲೆಗೆ ಮಕ್ಕಳು 2 ಕಡೆ ಕಾಲು ಸಂಕ ದಾಟಿ ಬರಬೇಕಾದ ಪರಿಸ್ಥಿತಿ ಇದೆ.ನೆರೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೇಲ್ತಡಿ ಶಾಲಾ ಶಿಕ್ಷಕ ಜಗನ್ನಾಥ ರೈ ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಎಂ.ಎ.ರಫೀಕ್,ಸತೀಶ್ ಅಂಗಡಿಮೂಲೆ,ತೀರ್ಥರಾಮ ಕೆಡೆಂಜಿ,ಹರೀಶ್ ,ತಾರನಾಥ ಬೊಳಿಯಾಲ,ಭರತ್ ರೈ ,ಸುಂದರಿ ಬಂಬಿಲ,ಹರಿಕಲಾ ರೈ ,ಚಂದ್ರಾವತಿ ಸುಣ್ಣಾಜೆ,ಯಶೋಧಾ,ಇಂದಿರಾ ಬೇರಿಕೆ ಹಾಗೂ ಗ್ರಾ.ಪಂ.ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು,ಶಾಲೆ,ಪ್ರೌಢಶಾಲೆಯ ಮುಖ್ಯಸ್ಥರು, ಆರೋಗ್ಯ ಇಲಾಖೆ,ಆಶಾ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ.ಮನ್ಮಥ ಸ್ವಾಗತಿಸಿ, ಪ್ರಮೋದ್ ಕುಮಾರ್ ವಂದಿಸಿದರು.ಸಿಬಂದಿಗಳಾದ ದಯಾನಂದ ಮಾಲೆತ್ತಾರು,ಯತೀಶ್ ಕುಮಾರ್ ಸಹಕರಿಸಿದರು.