ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸುವ ನೌಕರರಿಗೆ ಕಡಿಮೆ ಸಂಬಳ ಇರುವುದು ಬೇಸರ ತಂದಿದೆ. ಇದನ್ನೆ ಮುಂದಿಟ್ಟು ಬರವರಿಂದ ಶವ ಪರೀಕ್ಷೆಗೆ ಹಣ ಪಡೆದುಕೊಳ್ಳುವುದು ಸರಿಯೇ ? ಎಂದು ಕಲಿಯುಗ ಸೇವಾ ಸಮಿತಿ ಪ್ರಶ್ನಿಸಿದೆ.
ಸಮಿತಿಯ ಕಾರ್ಯದರ್ಶಿ ಸಂಪತ್ ಕುಮಾರ್ ಜೈನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಣ ಪಡೆದವರ ಪರ ಆರೋಗ್ಯಾಧಿಕಾರಿಯವರು ಮಾತನಾಡುವ ಮೂಲಕ ಲಂಚ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವವರ ನೈತಿಕ ಬಲ ಕಳೆದುಕೊಳ್ಳುವಂತಾಗಿದೆ ಎಂದು ತಿಳಿಸಿದ ಅವರು, ಈ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳ ವಿರುದ್ಧ ಸುಳ್ಳು ಆರೋಪ ಮಾಡಬೇಡಿ ಎಂದು ಅವರು ಹೇಳಿದರು.
ಮೇ 25 ರಂದು ಬಡ ಕುಟುಂಬವೊಂದು ಶವ ಪರೀಕ್ಷೆಗೆ ಬಂದಿದ್ದು, ಈ ಸಂದರ್ಭ ಹಣ ನೌಕರರು ಕೇಳಿದ್ದಾರೆ. ಈ ಕುರಿತು ದಾಖಲೆಯೂ ಇದೆ. ಈ ಸಂದರ್ಭದಲ್ಲಿ ನಾವು ವೈದ್ಯಾಧಿಕಾರಿ ಆಶಾ ಅವರಲ್ಲಿ ಹೇಳಿಕೊಂಡೆವು. ಎಂದಾಗ ಈ ರೀತಿಯ ದೂರುಗಳು ಪದೇ ಪದೇ ಬರುತ್ತಿರುತ್ತದೆ. ನೀವು ರೈಟಿಂಗ್‍ನಲ್ಲಿ ಕೊಡಿ ಎಂದರು. ಲಂಚ ಪಡೆದರೂ ತಕ್ಷಣ ನನ್ನ ಗಮನಕ್ಕೆ ತರುವಂತೆ ಶಾಸಕರೂ ತಿಳಿಸಿದ್ದಾರೆ. ಆದರೆ ಆರೋಗ್ಯಾಧಿಕಾರಿಯವರು ಹಣ ಪಡೆದವರಿಗೆ ಪ್ರೋತ್ಸಾಹ ನೀಡುವಂತೆ ಹೇಳಿಕೆ ನೀಡಿದ್ದಾರೆ.. ನಾವು ದೂರು ಕೊಟ್ಟು ಬಹಳ ಸಮಯವಾಗಿದೆ. ಆಸ್ಪತ್ರೆಯ ಮುಖ್ಯಾಧಿಕಾರಿಯವರು ನಮ್ಮನ್ನು ಕರೆ ಮಾತನಾಡಿಸಬಹುದಿತ್ತಲ್ಲ. ಆಸ್ಪತ್ರೆಯ ವೈದ್ಯರ ವಿರುದ್ಧ ನಾವು ಎಲ್ಲೂ ದೂರು ನೀಡಿಲ್ಲ. ಹಣ ಕೇಳಿದ ನೌಕರರ ವಿರುದ್ಧ ಮಾತ್ರ ನಾವು ದೂರು ನೀಡಿದ್ದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಿಯುವ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ, ಜತೆಕಾರ್ಯದರ್ಶಿಗಳಾದ ಸಂತೋಷ್, ಸುರೇಂದ್ರ, ವೀರಪ್ಪ ಉಪಸ್ಥಿತರಿದ್ದರು.