ಪುತ್ತೂರು: ಕೇಂದ್ರ ಸರಕಾರದ ಎನ್.ಟಿ.ಎ. ನಡೆಸುವ ರಾಷ್ಟ್ರೀಯ ಮಟ್ಟದ ಜೆ.ಇ.ಇ. ಎಡ್ವಾನ್ಸ್ಡ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವರ್ಷಿತ್ ಜೆ ಮತ್ತು ಅಮೋಘ್ ಎ.ಪಿ. ಉತ್ತಮ ರ್‍ಯಾಂಕುಗಳನ್ನು ಗಳಿಸಿ ರಾಷ್ಟ್ರಮಟ್ಟದ ಐ.ಐ.ಟಿ. ಸಂಸ್ಥೆಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ವರ್ಷಿತ್ ಜೆ 108 ಅಂಕಗಳನ್ನು ಗಳಿಸುವ ಮೂಲಕ ಸಾಮಾನ್ಯ ವರ್ಗದಲ್ಲಿ 1540 ರ್‍ಯಾಂಕ್, ಒ.ಬಿ.ಸಿ. ವಿಭಾಗದಲ್ಲಿ 3806 ರ್‍ಯಾಂಕ್ ಗಳಿಸಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಮೂಡ ಭಂಡಾರಿ ಬೆಟ್ಟುವಿನ ಜಯಂತ ಆರ್ ಮತ್ತು ಸೌಮ್ಯ ಜೆ ದಂಪತಿ ಪುತ್ರ.
ಅಮೋಘ್ ಎ.ಪಿ. ರವರು 53 ಅಂಕಗಳನ್ನು ಗಳಿಸುವ ಮೂಲಕ ಯಸ್.ಟಿ. ವಿಭಾಗದಲ್ಲಿ 1561 ರ್‍ಯಾಂಕ್ ಗಳಿಸಿದ್ದಾರೆ. ಇವರು ಪುತ್ತೂರು ಬನ್ನೂರಿನ ಅಶೋಕ್ ಮತ್ತು ಚೇತನವಾಣಿ ಅವರ ಪುತ್ರ.
ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕರು ಅಭಿನಂದಿಸಿದ್ದಾರೆ.