ಪುತ್ತೂರು: ನಗರದ ಅರುಣಾ ಥಿಯೇಟರ್ ಬಳಿಯ ಪ್ರಭು ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ “ಪ್ರೇರಣಾ” ಸಂಸ್ಥೆಯಲ್ಲಿ “ಸ್ಪೋಕನ್ ಇಂಗ್ಲಿಷ್ ತರಬೇತಿ”ಯ 3ನೇ ಬ್ಯಾಚ್‍ಗೆ ಗುರುವಾರ ಚಾಲನೆ ನೀಡಲಾಯಿತು.
ಪ್ರಗತಿ ಪ್ಯಾರಾ ಮೆಡಿಕಲ್ & ಅಲೈಡ್ ಸೈನ್ಸ್ ನ ಪ್ರಾಂಶುಪಾಲೆ ಪ್ರೀತಾ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತನ್ನ ಆಸಕ್ತಿ ನೆಲೆಯಲ್ಲಿ ಯಾವುದೇ ವಿಷಯವನ್ನು ಕಲಿಯಬಹುದು. ಪ್ರಸ್ತುತ ದಿನಗಳಲ್ಲಿ ಆಂಗ್ಲ ಭಾಷೆ ಪ್ರತಿಯೊಂದು ಕ್ಷೇತ್ರದಲ್ಲಿ ಅತೀ ಅಗತ್ಯವಿದ್ದು, ದೊಡ್ಡ ದೊಡ್ಡ ನಗರಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಂಗ್ಲ ಭಾಷೆಯನ್ನು ಸಣ್ಣ ವಯಸ್ಸಿನಿಂದಲೇ ಕರಗತ ಮಾಡಿಕೊಳ್ಳುಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆ ಒಳ್ಳೆಯ ಹೆಜ್ಜೆಯನ್ನು ಮುಂದಿಟ್ಟಿದೆ ಎಂದರು.
ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ತರಬೇತುದಾರ ಡಾ.ರಾಜೇಶ್ ಬೆಜ್ಜಂಗಳ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರೇರಣಾ ಸಂಸ್ಥೆಯ ನಿರ್ದೇಶಕರಾದ ವಸಂತ ವೀರಮಂಗಲ ಉಪಸ್ಥಿತರಿದ್ದರು. ಸಂಸ್ಥೆಯ ಮೆನೇಜರ್ ದಯಾಮಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಯಶ್ವಿನಿ ಹಾಗೂ ಮೋಕ್ಷಿತಾ ಸಹಕರಿಸಿದರು.
ಸ್ಪೋಕನ್ ಇಂಗ್ಲೀಷ್ ತರಬೇತಿ 30 ದಿನಗಳ ಕಾಲ ನಡೆಯಲಿದ್ದು, ಆಸಕ್ತರು ತಮ್ಮ ಹೆಸರನ್ನು ತಕ್ಷಣ ನೋಂದಾಯಿಸಿಕೊಳ್ಳಬಹುದು. ಪ್ರೇರಣಾ, ಪ್ರಭು ಬಿಲ್ಡಿಂಗ್, ಪ್ರಥಮ ಮಹಡಿ, ಅರುಣಾ ಥಿಯೇಟರ್ ಎದುರು, ಕೆನರಾ ಬ್ಯಾಂಕ್ ಬಳಿ ಸಂಸ್ಥೆಯನ್ನು ಸಂಪರ್ಕಿಸಬಹುದು.
ಮೊಬೈಲ್ : 8904877721,7204977721 ಈ ನಂಬರ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.