ಚಿಕಿತ್ಸಕ ಗುಣದ ಕವಿ ಕನಕ : ಪ್ರೊ. ತಾಳ್ತಜೆ | ರಾಮಕುಂಜದಲ್ಲಿ ಕನಕ ಕಮ್ಮಟ ಉದ್ಘಾಟನೆ

ರಾಮಕುಂಜ: ತಮಿಳುನಾಡಿನಿಂದ ಮೊದಲ್ಗೊಂಡು ಕನ್ನಡನಾಡಿನ ಮೂಲಕ ಉತ್ತರ ಭಾರತ ಕಡೆಗೆ ವ್ಯಾಪಿಸಿದ ಭಕ್ತಿಲತೆ ಭಾರತದ ಬದುಕನ್ನು ಪೋಷಿಸಿದೆ. ಈ ಭಕ್ತಿ ಪರಂಪರೆಯ ವಿಶಿಷ್ಟ ಕವಿ ಕನಕ. ತನ್ನ ಆಧ್ಯಾತ್ಮಿಕ ಮತ್ತು ಸಾಮಾಜಿಕ ರಚನೆಗಳಲ್ಲಿ ಕನಕದಾಸರು ಚಿಕಿತ್ಸಕ ಗುಣದ ಕವಿಯಾಗಿ ಮೂಡಿಬಂದಿದ್ದಾರೆ ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಹೇಳಿದರು.

ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ,ಕನಕದಾಸ ಸಂಶೋಧನಾ ಕೇಂದ್ರ ಮತ್ತು ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜು  ಸಹಯೋಗದೊಂದಿಗೆ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಒಂದು ದಿನದ ಕನಕ ಕೀರ್ತನ ಗಾಯನ ಕಮ್ಮಟ ವನ್ನು ಉದ್ಘಾಟಿಸಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಶುದ್ಧಾಂಗ ಸೈನಿಕನಾಗಿದ್ದ ಕನಕ ತಿರುಪತಿ ತಿಮ್ಮಪ್ಪ, ವಿಶಿಷ್ಟ ಅದ್ವೈತ ಮತ್ತು ದ್ವೈತ ಸಿದ್ಧಾಂತದ ಮೂಲಕ ಕಂಡು ಕೊಂಡ ದಿವ್ಯಾನುಭವ ಅವರ ಕೀರ್ತನೆಗಳಲ್ಲಿ ಅಭಿವ್ಯಕ್ತಗೊಂಡಿದೆ ಎಂದು ತಾಳ್ತಾಜೆ ಹೇಳಿದರು.



































 
 

ಕಾರ್ಯಕ್ರಮದಲ್ಲಿ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ  ರಾಧಾಕೃಷ್ಣ ಕೆ ಯಸ್ ಅಧ್ಯಕ್ಷತೆ ವಹಿಸಿದ್ದರು.  ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ  ಆಶಯ ಭಾಷಣ ಮಾಡಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸುಂದರ ಶೆಟ್ಟಿ ಉಪಸ್ಥಿತರಿದ್ದರು.

   ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯ ದ ಪ್ರಿನ್ಸಿಪಾಲ್  ಗಣರಾಜ ಕುಂಬ್ಳೆ  ಸ್ವಾಗತಿಸಿದರು. ರಾಮಕುಂಜ ಲಲಿಕಲಾ ಸಂಘದ ಸಂಯೋಜಕಿ ಜಯಶ್ರೀ ಭಟ್ ವಂದಿಸಿದರು. ಪ್ರಸಿದ್ಧ ಗಾಯಕರಾದ ಯಜ್ಞೇಶ್ ಆಚಾರ್ಯ ಸುಬ್ರಹ್ಮಣ್ಯ  ಅವರು ಕನಕ ಕೀರ್ತನ ಗಾಯನ ಕಮ್ಮಟವನ್ನು ನಡೆಸಿಕೊಟ್ಟರು. ಶ್ರೀವಾಣಿ ಕಾಕುಂಜೆ ಸಹಗಾಯಕರಾಗಿ, ಸುಹಾಸ್ ಹೆಬ್ಬಾರ್  ಮತ್ತು ರವಿರಾಜ್ ತಬಲ ಮತ್ತು ಹಾರ್ಮೋನಿಯಂನಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ವಿವಿಧ ಕಾಲೇಜಿನ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top