ಪುತ್ತೂರು: ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ನಮಗೊಂದು ಮೂರು ಸೆಂಟ್ಸ್ ಜಾಗ ಕೊಡಿ ಎಂದು ಅನೇಕ ಅರ್ಜಿಗಳು ಗ್ರಾಮೀಣ ಭಾಗದಿಂದ ಬಂದಿದ್ದು ಪ್ರತೀ ಗ್ರಾಮದಲ್ಲಿ ಎರಡರಿಂದ ಮೂರು ಎಕ್ರೆ ಜಾಗ ಗುರುತಿಸಿ ಅದನ್ನು ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡುವಲ್ಲಿ ಕ್ರಮಕೈಗೊಳ್ಳಲಿದ್ದೇನೆ ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು ಈಗಾಗಲೇ ಜಾಗ ಹುಡಕುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಕೆಯ್ಯೂರಿನಲ್ಲಿ ಸೋಮವಾರ ನಡೆದ ಕೆಯ್ಯೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ. ಅಭಿವೃದ್ದಿ ಕೆಲಸ ನಾನು ಮಾಡುತ್ತೇನೆ ಅದನ್ನು ಪ್ರಚಾರ ಮಾಡುವ ಮತ್ತು ಇದು ಕಾಂಗ್ರೆಸ್ ಸರಕಾರ ಮಾಡಿದ ಕೆಲಸ ಎಂಬುದನ್ನು ಗ್ರಾಮದ ಮನೆಮನೆಗೂ ತಲುಪಿಸುವ ಕೆಲಸವನ್ನು ಎಲ್ಲಾ ಕಾರ್ಯಕರ್ತರು ಮಾಡಬೇಕು. ಬಾಕಿ ಇರುವ ೯೪ ಸಿ, ಅಕ್ರಮಸಕ್ರಮ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಲಿದ್ದು ಗ್ರಾಮಗಳಲ್ಲಿ ಅರ್ಜಿಗಳು ಬಾಕಿ ಇರುವ ಫಲಾನುಭವಿಗಳು ಸ್ಥಳೀಯ ವಲಯ ಮತ್ತು ಬೂತ್ ಅಧ್ಯಕ್ಷರನ್ನು ಸಂಪರ್ಕಿಸಿ ಅವರಲ್ಲಿ ಮಾಹಿತಿ ನೀಡಬೇಕು. ಪಕ್ಷ ಬೇದವಿಲ್ಲದೆ ಎಲ್ಲರ ಅರ್ಜಿಗಳನ್ನು ನಯಾ ಪೈಸೆ ಲಂಚವಿಲ್ಲದೆ ಮಾಡಿಕೊಡುತ್ತೇನೆ ಎಂದು ಹೇಳಿದ ಅವರು ವಲಯ ಮತ್ತು ಬೂತ್ ಅಧ್ಯಕ್ಷರ ಮೂಲಕವೇ ಫಲಾನುಭವಿಗಳು ಕಡತಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆಯನ್ನು ನೀಡಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ.ವಿಶ್ವನಾಥ ರೈ ಮಾತನಾಡಿದರು.
ಸಭೆಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಅಮಲರಾಮಚಂದ್ರ, ಫಾರೂಕ್ ಬಾಯಬ್ಬೆ, ದಾಮೋದರ ಪೂಜರಿ, ಕಾಂಗ್ರೆಸ್ ಮುಖಂಡರುಗಳಾದ ಸಂತೋಷ್ ರೈ ಇಳಂತಜೆ, ಮೌರಿಶ್ ಮಸ್ಕರೇನಸ್, ಬಟ್ಯಪ್ಪ ರೈ ದೇರ್ಲ, ಗ್ರಾಪಂ ಸದಸ್ಯ ಹನೀಫ್ ಕೆ ಎಂ, ಅಬ್ದುಲ್ ಖಾದರ್ ಮೇರ್ಲ, ವಿಶ್ವನಾಥ ಪೂಜಾರಿ, ಜಗನ್ನಾಥ ಶೆಟ್ಟಿ ನೆಲ್ಲಿಕಟ್ಟೆ, ಗ್ರಾಪಂ ಸದಸ್ಯರಿಗಳಾದ ಜಯಂತ ಪುಜಾರಿ, ಸೇಸಪ್ಪ, ಅಮಿತಾ, ಸೇದು ನಾಯರ್, ಬೋಳೋಡಿ ಚಂದ್ರಹಾಸ ರೈ, ಶೀನಪ್ಪ ರೈ, ಆದರ್ಶ ರೈ ಕೆಯ್ಯೂರು, ಪುರಂದರ್ ರೈ ನಿಶ್ಮಿತಾ, ಮೆಲ್ವಿನ್ ಮೊಂತೆರೋ ಕುಂಬ್ರ, ಲ್ಯಾನ್ಸಿ ಮಸ್ಕರೇನಸ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಎಕೆ ಜಯರಾಮ ರೈ ಸ್ವಾಗತಿಸಿ ವಂದಿಸಿದರು. ದಾಮೋದರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.