ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವಿಟ್ಲ. ಪೆರ್ನೆ ವಲಯದ ರೇವತಿ ಪೂಜಾರಿ ಉರಿಮಾಡ ಅವರ ಮನೆ ಬೀಳುವ ಹಂತದ ಜತೆಗೆ ಶೌಚಾಲಯ ಇರುವುದಿಲ್ಲ.ಈ ಹಿನ್ನಲೆಯಲ್ಲಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಸೇರಿ ರೇವತಿ ಯವರ ಹೊಸ ಶೌಚಾಲಯ ರಚಗೆ ಗುಂಡಿಯನ್ನು ಶ್ರಮದಾನದ ಮೂಲಕ ನಿರ್ಮಿಸಿದರು.
ರೇವತಿ ಅವರ ಪತಿ ಮರಣ ಹೊಂದಿದ್ದು ಪುತ್ರ ಮಾತ್ರ ಇದ್ದಾರೆ.. ಅವರು ಮೊದಲು ಇದ್ದ ಮನೆ ಬೀಳುವ ಹಂತಕ್ಕೆ ಬಂದ್ದಿದ್ದು. ಪಂಚಾಯತ್ ನಿಂದ ಹೊಸ ಮನೆ ಮಂಜೂರು ಆಗಿದ್ದರೂ ಇಲ್ಲಿಯ ತನಕ ಶೌಚಾಲಯ ಇರಲಿಲ್ಲ ಮತ್ತು ಅವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಶ್ರಮದಾನದಲ್ಲಿ ಸುರೇಶ, ಗೋಪಾಲ, ರಮೇಶ, ಕೇಶವ, ಜಗದೀಶ, ಶೀನಪ್ಪ, ಗಿರೀಶ, ವೆಂಕಪ್ಪ ಪಾಲ್ಗೊಂಡಿದ್ದರು.