ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೆಲವೊಂದು ಸೌಲಭ್ಯಗಳ ಕೊರತೆ ಇದ್ದು ಆಕೊರತೆಯನ್ನು ನೀಗಿಸಿ ಜನರಿಗೆ ಸೇವೆ ನೀಡುವಲ್ಲಿ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಶಾಸಕರಾದ ಅಶೋಕ್ ರೈ ಮನವಿ ಸಲ್ಲಿಸಿದರು.
ಸಾಮಾನ್ಯ ಮಹಿಳಾ ರೋಗಿಗಳಿಗೆ ಕೊಠಡಿ ವ್ಯವಸ್ಥೆ, ೫೦ ಹಾಸಿಗೆಗಳನ್ನು ಹಾಕುವಲ್ಲಿ ನೂತನ ಕೊಠಡಿಯನ್ನು ನಿರ್ಮಾಣ ಮಾಡುವುದು, ಆಸ್ಪತ್ರೆಯ ಆವರಣದ ಬಾಕಿ ಇರುವಲ್ಲಿ ಇಂಟರ್ಲಾಕ್ ಅಳವಡಿಸುವುದು, ರಕ್ತ ಶೇಖರಣಾ ಘಟಕದ ನವೀಕರಣ ಮಾಡುವುದು, ಆಸ್ಪತ್ರೆಯಲ್ಲಿ ಫಿಸಿಯೋಥೆರಫಿ ಘಟಕದ ನವೀಕರಂ, ಅನಸ್ತೇಶಿಯಾ ವರ್ಕ್ ಸ್ಟೇಷನ್ಮ ಹೊರಿಝೊನ್ಟಲ್ ಅಟೋಕ್ಲೇವ್, ಮತ್ತು ಆಸ್ಪತ್ರೆಗೆ ಪ್ರಸೂತಿ ತಜ್ಞರನ್ನು ನೇಮಕ ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ವ್ಯವಸ್ಥೆಗಳು ಜಾರಿಯಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೌಲಭ್ಯ ದೊರೆಯಲಿದ್ದು ಶೀಘ್ರದಲ್ಲೇ ಈ ವ್ಯವಸ್ಥೆಯನ್ನು ಮಾಡಿಕೊಡುವಂತೆ ಸಚಿವರಲ್ಲಿ ಶಾಸಕರು ಮನವಿ ಮಾಡಿದರು.