ಪುತ್ತೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸುಳ್ಯ ತಾಲೂಕಿನ ಧರ್ಮಜಾಗೃತಿ ಹಾಗೂ ಸಮುದಾಯ ಸಮ್ಮಿಲನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹಗಲಿರುಳು ಸೇವೆ ಸಲ್ಲಿಸಿದ ಎಲ್ಲರಿಗೂ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಶುಭ ಅನುಗ್ರಹ ಸಂದೇಶವನ್ನು ರವಾನಿಸಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ಅನುಗ್ರಹ ಸಂದೇಶದಲ್ಲಿ, ಮಹಾಸ್ವಾಮೀಜಿ ಅವರು ಸಮುದಾಯದ ಸರ್ವಜನರಲ್ಲಿ ಧರ್ಮಜಾಗೃತಿಯ ಸಂಚಲನವನ್ನುಂಟು ಮಾಡಿರುವುದು ಸೌಭಾಗ್ಯವೇ ಸರಿ.
ಈ ಕಾರ್ಯಕ್ರಮ ಯಶಸ್ವಿ ಆಗಿರುವುದರಲ್ಲಿ ಜನರು ತೋರಿದ ಗುರುಭಕ್ತಿ, ಶ್ರದ್ಧೆ, ಕಾರ್ಯತತ್ಪರತೆ ಮೆಚ್ಚುವಂತಹದ್ದೇ ಆಗಿತ್ತು. ಈ ಅಭೂತಪೂರ್ವ ಯಶಸ್ಸಿಗೆ ಹಗಲಿರುಳು ಸೇವೆ ಸಲ್ಲಿಸಿದ ಎಲ್ಲರಿಗೂ ಶ್ರೀ ಕಾಲಭೈರವೇಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಿ, ಶ್ರೀಗುರುಗಳ ಅನುಗ್ರಹಿಸಲೆಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.