ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 6.5 ಶೇಕಡಾದಲ್ಲಿಯೇ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದು, ಪರಿಣಾಮ ಸಾಲಗಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಹಣದುಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಬಡ್ಡಿದರ ಏರಿಕೆ ಮಾಡುವ ಪ್ರಮೇಯ ಬರಲಿಲ್ಲ. ಆದರೆ ಹಣದುಬ್ಬರ ಇಳಿಕೆಯಾಗಿದ್ದರೂ ಸಹ ಸಮಾಧಾನಕರ ಸ್ಥಿತಿಗೆ ನಾವು ಬಂದಿಲ್ಲ. ನಮ್ಮ ಗುರಿ ಇನ್ನೂ ಮೇಲ್ಮಟ್ಟದಲ್ಲಿದೆ. ಹೀಗಾಗಿ ನಾವು ಹಣದುಬ್ಬರದ ಬಗ್ಗೆ ಅರ್ಜುನನ ಕಣ್ಣಿಡಬೇಕು ಎಂದು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಹಣಕಾಸು ನೀತಿ ಸಮಿತಿ ಸಭೆ ನಡೆಸಲಾಗಿದ್ದು ಈ ಸಭೆಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸೇರಿದಂತೆ ಎಂಪಿಸಿಯ ಆರು ಮಂದಿ ಸದಸ್ಯರು ಭಾಗಿಯಾಗಿದ್ದರು. ಈ ಸಭೆಯಲ್ಲಿ ರೆಪೋದರವನ್ನು 6.5 ಶೇಕಡಾದಲ್ಲಿಯೇ ಮುಂದುವರಿಸಲು ತೀರ್ಮಾನಿಸಲಾಗಿದೆ