ಇಂದು (ಜೂ.8)  :ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿ.ವಿ ಪದವಿ ಕಾಲೇಜುಗಳ ಅಂತರ್-ಕಾಲೇಜು ಫೆಸ್ಟ್

ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಕಾಲೇಜುಗಳ ಅಂತರ್-ಕಾಲೇಜು ಮ್ಯಾನೇಜ್ಮೆಂಟ್ ಹಾಗೂ ಸಾಂಸ್ಕೃತಿಕ ಫೆಸ್ಟ್ ‘ಕೃತ್ವ ‘ಜೂ.8 ರಂದು ಕಾಲೇಜಿನಲ್ಲಿ ಜರಗಲಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಫೈನಾನ್ಸ್ ಆಫೀಸರ್ ಪ್ರೊ|ವೈ ಸಂಗಪ್ಪರವರು ಫೆಸ್ಟ್ ಅನ್ನು ದೀಪ ನ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮಾಜಿ  ಕಾರ್ಪೋರೇಟರ್ ಹಾಗೂ ಕುಳಾಯಿ ಫೌಂಡೇಶನ್ ನ ಸ್ಥಾಪಕರು, ಅಧ್ಯಕ್ಷರೂ ಆಗಿರುವ ಪ್ರತಿಭಾ ಕುಳಾಯಿ, ಪುತ್ತೂರು ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ವೈ ನರೇಂದ್ರ ರೆಡ್ಡಿರವರು ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರಿನ ವಿಝ್ಡಮ್ ಎಡ್ ನ ಡಾ|ಗುರು ತೇಜ್, ಪುತ್ತೂರು ಸ್ನೇಹ ಸಿಲ್ಕ್ಸ್ ನ ಮಾಲಕ ಸತೀಶ್ ಎಸ್.ರವರು ಭಾಗವಹಿಸಲಿದ್ದಾರೆ ಎಂದು ಅಕ್ಷಯ ಕಾಲೇಜಿನ ಫೆಸ್ಟ್ ಇದರ ಸಂಯೋಜಕ ರಕ್ಷಣಾ ಟಿ.ಆರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಗನ್ ದೀಪ್ ಎ.ಬಿ, ಕಾರ್ಯದರ್ಶಿ ಲಿಖಿತ್ ಎ.ವಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

35 ಕಾಲೇಜುಗಳು ಭಾಗವಹಿಸುವ ನಿರೀಕ್ಷೆ…



































 
 

ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ಪದವಿ ಕಾಲೇಜುಗಳ ಅಂತರ್-ಕಾಲೇಜು ಸ್ಪರ್ಧಾಕೂಟ ಇದಾಗಿದ್ದು ಸುಮಾರು 30 ರಿಂದ 35 ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಈ ಸ್ಪರ್ಧಾಕೂಟದಲ್ಲಿ ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಫೈನಾನ್ಸ್, ಸಮೂಹ ನೃತ್ಯ, ಮೂವೀ ಸ್ಪೂಫ್, ಸ್ಟೋರಿ ಬಿಲ್ಡಿಂಗ್, ಮಲ್ಟಿ ಟಾಸ್ಕಿಂಗ್, ಪಾಟ್ ಡೆಕೋರೇಶನ್, ಫ್ಯಾಶನ್ ಶೋ, ಟ್ಯಾಟ್ಯೂಯಿಂಗ್, ಡ್ರಾಯಿಂಗ್, ಫೇಸ್ ಆಫ್ ಕೃತ್ವ  ಹೀಗೆ  ಒಟ್ಟು 12 ಇವೆಂಟ್ ಗಳನ್ನು ಫೆಸ್ಟ್ ಹೊಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top