ಕಡಬ : ಎರಡು ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಕಡಬದ ಆಡಳಿತ ಸೌಧ (ಮಿನಿ ವಿಧಾನ ಸೌಧ)ವು ಸೋಮವಾರ ಸಂಜೆಯ ತನಕ ಖಾಲಿಖಾಲಿಯಾಗಿ ಬಿಕೋ ಅನ್ನುತ್ತಿತ್ತು, ಮಂಗಳವಾರ ತಾಲೂಕು ದಂಡಾಧಿಕಾರಿ ಹಾಗೂ ಕಂದಾಯ ಇಲಾಖಾ ಕಛೇರಿಗಳು ಮಿನಿವಿಧಾನಸೌಧಕ್ಕೆ ಸ್ಥಳಾಂತವಾಗುವ ಮೂಲಕ ಈಗ ಗಿಜಿಗುಟ್ಟಲು ಪ್ರಾರಂಭವಾಗಿವೆ.
ಮಿನಿ ವಿಧಾನ ಸೌಧದಲ್ಲಿ ಒಂದನೇ ಮಹಡಿಗೆ ತಹಸೀಲ್ದಾರ್ ಕಛೇರಿ, ಉಪತಹಸೀಲ್ದಾರ್‌ಗಳ ಕೊಠಡಿ, ವಿಷಯ ನಿರ್ವಾಹಕರುಗಳ ಕೊಠಡಿ ಹಾಗೂ ಕೇಸ್ ವರ್ಕರ್‌ಗಳು, ಹಾಗೂ ತಾಲೂಕು ಕಛೇರಿಗೆ ಸಂಬಂಧಪಟ್ಟ ಎಲ್ಲಾ ಸ್ತರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಗಳು ಸ್ಥಳಾಂತರಗೊಳ್ಳುತ್ತಿವೆ. ಕಾರ್ಯನಿರ್ವಹಿಸಲು ಪ್ರಾರಂಭವಾಗಿವೆ. ಇಲ್ಲಿಗೆ ದಾಖಲೆಯ ಕೊಠಡಿ ಕೂಡಾ ವರ್ಗಾವಣೆಗೊಂಡಿದೆ.
ಉಳಿದಂತೆ ನೆಮ್ಮದಿ ಕೇಂದ್ರ, ಭೂಮಿ ಕೇಂದ್ರ, ಆಧಾರ್ ಕೇಂದ್ರಗಳು ವಿಧಾನ ಸೌಧದ ಕೆಳ ಅಂತಸ್ತಿಗೆಸ್ಥಳಾಂತಗೊಳ್ಳುತ್ತಿವೆ. ಕಡಬ ಪಟ್ಟಣ ಪಂಚಾಯಿತಿ ಕಟ್ಟಡ ಬಳಿ ಇದ್ದ ನೆಮ್ಮದಿ ಭೂಮಿ ಕೇಂದ್ರಗಳು ವಿಧಾನ ಸೌಧಕ್ಕೆ ಸ್ಥಳಾಂತರವಾದರೆ ಕಂದಾಯ ನಿರೀಕ್ಷರು ಹಾಗೂ ಕಡಬ ಗ್ರಾಮಕರಣಿಕರ ಕಛೇರಿ ಹಳೆಯ ತಹಸೀಲ್ದಾರ್ ಕಛೇರಿಯಲ್ಲಿ ಕಾರ್ಯನಿರ್ವಹಿಸಲಿವೆ.