ಪುತ್ತೂರು: ನವತೇಜ ಪುತ್ತೂರು ಹಾಗೂ ಜೆಸಿಐ ಪ್ರಸ್ತುತಪಡಿಸುವ “ಹಲಸು ಹಣ್ಣು ಮೇಳ-2023 ಜೂ.17 ಹಾಗೂ 18 ರಂದು ಇಲ್ಲಿಯ ಜೈನ ಭವನದಲ್ಲಿ ನಡೆಯಲಿದೆ.
ಮೇಳದ ಅಂಗವಾಗಿ ರೈತರಿಂದ ತಾಜಾ ಹಣ್ಣುಗಳ ಪ್ರದರ್ಶನ, ಮಾರಾಟ ನಡೆಯಲಿದ್ದು, ಮೇಳದಲ್ಲಿ ಆಹಾರ ಮಳಿಗೆಗಳು, ಹಣ್ಣಿನ ಗಿಡಗಳು ಮತ್ತು ಬೀಜಗಳು, ಸಂಸ್ಕರಣೆ, ಮೌಲ್ಯವರ್ಧನೆ ಉತ್ಪನ್ನಗಳು, ಕೃಷಿ ಉದ್ಯಮ ಮಳಿಗೆಗಳು ಸಹಿತ ರೈತರ ಸಂಪರ್ಕ, ಸಮಾಲೋಚನೆ, ವಿವಿಧ ಮನೋರಂಜನಾ ಕಾರ್ಯಕ್ರಮ, ಹವಿಶೇಷ ಸ್ಪರ್ಧೆಗಳು ನಡೆಯಲಿವೆ.
ಹಲಸಿನ ಹಣ್ಣಿನ ಹೋಳಿಗೆ, ಹಪ್ಪಳ, ದೋಸೆ, ಸಂಡಿಗೆ, ಪಾನಿಪೂರಿ, ಮಂಚೂರಿ, ಕೇಕ್, ಸೀರಾ, ಪೇಡಾ ಹೀಗೆ ಹತ್ತು ಹಲವು ಹಲಸಿನ ಹಣ್ಣಿನ ಖಾದ್ಯಗಳು, ತಿಂಡಿ-ತಿನಿಸುಗಳು ಮೇಳದಲ್ಲಿ ಮೇಳೈಸಲಿವೆ.
ಅಲ್ಲದೆ ಹಲಸಿನ ಹಣ್ಣಿನ ಜತೆ ವಿವಿಧ ಹಣ್ಣುಗಳಾದ ಡ್ರ್ಯಾಗನ್, ರಂಬೂಟಾನ್, ಪಪ್ಪಾಯ, ಮಾವಿನಹಣ್ಣುಗಳು ಮೇಳದಲ್ಲಿ ಗಮನ ಸೆಳೆಯಲಿವೆ.