ಪುತ್ತೂರು: ಮಾಣಿ – ಮೈಸೂರು ಹೆದ್ದಾರಿಯ ಕುಂಬ್ರ ಶೇಖಮಲೆಯಲ್ಲಿ ಬುಧವಾರ ಸಂಜೆ ಭಾರೀ ಗಾಳಿ ಮಳೆಯಾಗಿದ್ದು, ಬೃಹತ್ ಮರ ರಸ್ತೆಗಡ್ಡವಾಗಿ ಬಿದ್ದಿದೆ. ಮರಗಳು ಧರೆಗುರುಳುತ್ತಿದ್ದಂತೆ ಕೆಲ ವಿದ್ಯುತ್ ಕಂಬಗಳು ಮುರಿದು ಧರಾಶಾಹಿಯಾಗಿದೆ. ಪರಿಣಾಮ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಯಿತು.
ತಕ್ಷಣ ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ತಂತಿ, ಕಂಬಗಳನ್ನು ತೆರವು ಮಾಡಿದರು. ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮರಗಳನ್ನು ತೆರವು ಮಾಡಿದರು. ಇದರಿಂದಾಗಿ ತಕ್ಷಣದಲ್ಲೇ ಸುಗಮ ಸಂಚಾರಕ್ಕೆ ರಸ್ತೆ ತೆರೆದುಕೊಂಡಿತು.