ಪುತ್ತೂರು: ಬಿ.ಸಿ.ರೋಡಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ಕಳೆದ 11 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ದಕ್ಷ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಪ್ರಾಮಾಣಿಕವಾಗಿ ವ್ಯವಹಾರ ನಡೆಸಿ ಗ್ರಾಹಕ ವರ್ಗದ ಮೆಚ್ಚುಗೆಗೆ ಪಾತ್ರವಾಗಿದೆ.
2022ರಲ್ಲಿ ದಶಮಾನೋತ್ಸವ ಸಂಭ್ರಮದಲ್ಲಿದ್ದ ಸಂದರ್ಭ ಸಂಭ್ರಮದ ನೆನಪಿಗಾಗಿ ಮಂಗಳೂರಿನ ಕೇಂದ್ರ ಭಾಗದಲ್ಲಿ ತನ್ನ ಶಾಖೆಯನ್ನು ತೆರೆಯುವುದರ ಜತೆಗೆ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯನ್ನೂ ಆರಂಭಿಸಿದೆ. ಸವಿತಾ’ಸ್ ಬ್ಯೂಟಿ ಕಾರ್ನರ್ ಎಂಬ ಹೆಸರಿನಲ್ಲಿ ಸಹಕಾರಿ ತತ್ವದಡಿ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಕ್ಷೌರಿಕ ಬಂಧುಗಳು ಹಾಗೂ ಲೇಡಿಸ್ ಬ್ಯೂಟಿ ಪಾರ್ಲರ್ ಗಳಿಗೆ ಒದಗಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದೆ.
ಇದೀಗ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಎರಡನೇ ದೊಡ್ಡ ಪಟ್ಟಣವಾದ ಪುತ್ತೂರಿಗೂ ಕಾಲಿಟ್ಟಿದ್ದು, ಮೇ 30ರಂದು ಪುತ್ತೂರು ಹೃದಯ ಭಾಗದ ಜಿ.ಎಲ್. ವನ್ ಮಾಲ್ ಬಳಿಯಿರುವ ಶಿವ ಆರ್ಕೇಡ್ ನ ಒಂದನೇ ಮಹಡಿಯಲ್ಲಿ ತನ್ನ ಶಾಖೆ ಸವಿತಾ ಸೌಹಾರ್ದ ಸಹಕಾರಿ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆಗೊಳ್ಳಲಿದೆ.
ಪ್ರಸ್ತುತ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ವಿಶ್ವನಾಥ್ ಬಂಟ್ವಾಳ ಅಧ್ಯಕ್ಷರಾಗಿದ್ದು, ಸುರೇಶ್ ನಂದೊಟ್ಟು ಉಪಾಧ್ಯಕ್ಷರಾಗಿದ್ದು, ನಿರ್ದೇಶಕರಾಗಿ ದಿನೇಶ್ ಎಲ್. ಬಂಗೇರ ಬೈಕಂಪಾಡಿ, ಆನಂದ ಭಂಡಾರಿ ಗುಂಡದಡೆ, ರವೀಂದ್ರ ಭಂಡಾರಿ ಕೃಷ್ಣಾಪುರ, ಮೋಹನ ಭಂಡಾರಿ ಪ್ಯೊತಾಜೆ, ಭುಜಂಗ ಸಾಲಿಯಾನ್ ಬಿ.ಸಿ.ರೋಡು, ಪದ್ಮನಾಭ ಭಂಡಾರಿ ಸುಳ್ಯ, ಎಸ್.ರವಿ ಮಡಂತ್ಯಾರು, ವಸಂತ ಎಂ. ಬೆಳ್ಳೂರು, ಆಶಾ ಕಂದಾವರ, ಸುಮಲತ ಸುರೇಂದ್ರ ಪುತ್ತೂರು, ಕಿಶನ್ ಎಸ್. ಹಾಗೂ ಸಿಬ್ಬಂದಿ ಬಳಗದೊಂದಿಗೆ ಪ್ರಾಮಾಣಿಕ ವ್ಯವಹಾರ ನಡೆಸುತ್ತಿದೆ.