ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬಸಭಾಂಗಣದಲ್ಲಿ ವಿಷನ್-2023 ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಯೋಜಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿಪ್ರಕಾಶ್ ಮೊಂತೆರೊ ವಹಿಸಿ ಮಾತನಾಡಿ,ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಇಂತಹ ಸ್ಪರ್ಥೆಗಳು ವಿದ್ಯಾರ್ಥಿಗಳಿಗೆ ತಮ್ಮಪ್ರತಿಭೆ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಕಾರಿಯಾಗುತ್ತವೆ. ಕಾಲೇಜು ಮಟ್ಟದ ಸ್ಪರ್ಧೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸುತ್ತವೆ ಎಂದರು.
ವಿದ್ಯಾರ್ಥಿನಿಯರಾದ ದಿಶಾ ಮತ್ತು ಅಪೂರ್ವ ಪ್ರಾರ್ಥಿಸಿದರು. ವಿನ್ಯಾಕಲ್ ಐ ಟಿ ಕ್ಲಬ್ ಸಂಯೋಜಕಿ ರಾಜೇಶ್ವರಿ ಎಂ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗ ಮುಖ್ಯಸ್ಥ ವಿನಯಚಂದ್ರ ವಂದಿಸಿದರು. ಪ್ರಾಧ್ಯಾಪಕಿ ವಾರಿಜಾ ಬಹುಮಾನ ವಿಜೇತರ ಹೆಸರನ್ನು ವಾಚಿಸಿದರು. ಪ್ರಾಧ್ಯಾಪಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ವಿನ್ಯಾಕಲ್ ಐ ಟಿ ಕ್ಲಬ್ ಅಧ್ಯಕ್ಷ ಜಾನ್ ವಿಸ್ಟನ್ ಟೈಟಸ್ ಡಯಾಸ್ ವೇದಿಕೆಯಲ್ಲಿಉಪಸ್ಥಿತರಿದ್ದರು.
ವಿಷನ್-2023 ರ ಮೋಡೆಲ್ ಮೇಕಿಂಗ್, ಪೇಪರ್ ಪ್ರೆಸಂಟೇಶನ್ ಕೊಲ್ಯಾಜ್, ಕೋಡ್ವಾರ್, ವೆಬ್ ಡಿಸೈನ್, ಇ-ಗೇಂಮಿಂಗ್, ಪ್ರಾಜೆಕ್ಟ್ ಲೀಡ್, ಡಾಕ್ಯುಮೆಂಟರಿ, ಐಟಿಕ್ವಿಜ್, ಹಾಗೂ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ಗಳನ್ನು ಆಯೋಜಿಸಲಾಗಿತ್ತು.
ಪ್ರಾಧ್ಯಾಪಕರಾದ ತೇಜಸ್ವಿ ಭಟ್, ಧನ್ಯ ಪಿ.ಟಿ, ಡಾ| ಡಿಂಪಲ್ ಫೆರ್ನಾಂಡಿಸ್, ಪ್ರಜ್ವಲ್ ರಾವ್, ಚೈತ್ರ , ಧನ್ಯಶ್ರೀ ಹಾಗೂನೀಲಮ್, ಕುಟ್ಟಪ್ಪ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಒಟ್ಟು 15 ತಂಡಗಳು ಭಾಗವಹಿಸಿದ್ದು ಪ್ರಖ್ಯಾತ್ ನೇತೃತ್ವದ ಎರರ್ ಎಂಪರರ್ಸ್ ತಂಡಕ್ಕೆ ತೃತೀಯ, ಕಾರ್ತಿಕ್ ಕೆಆರ್ ನೇತೃತ್ವದ ವೆಬ್ ಸ್ಪೈಡರ್ಸ್ ತಂಡಕ್ಕೆ ದ್ವಿತೀಯ ಬುಹುಮಾನ ದೊರೆತರೆ, ಜಾನ್ ವಿಸ್ಟನ್ ಟೈಟಸ್ ಡಯಾಸ್ ನೇತೃತ್ವದ ಐಟಿ ಇಲೈಟ್ಸ್ ತಂಡ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿತು.