ಪುತ್ತೂರು: ದೇವಾಂಗ ಸೇವಾ ಸಮಾಜದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಲಯನ್ಸ್ ಪುತ್ತೂರು ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಎಂ ಎನ್ ಚೆಟ್ಟಿಯಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ನರಿಮೊಗರು ಗ್ರಾಪಂ ಪಿಡಿಒ ರವಿಚಂದ್ರ ಯು ಬಿಕಾಂ, ಎಂ.ಎ ಪಿ.ಡಿ.ಒ ನರಿಮೊಗ್ರು ಗ್ರಾಮ ಪಂಚಾಯತ್ ರವರು ಪಾಲ್ಗೊಂಡಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ದಿವಾಕರ ಶೆಟ್ಟಿ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ಮಲಾರವರು ಪ್ರಾರ್ಥಿಸಿದರು, ವಿಧ್ಯಾ ಗಿರಿಧರ್ ಸ್ವಾಗತಿಸಿದರು.ಸುನೀತಾ ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಹುಮಾನ ವಿತರಣೆ, ಕಲಿಕೆಗೆ ಪ್ರೋತ್ಸಾಹ ಧನ, ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆಯನ್ನು ಹಿರಿಯರು ಹಾಗೂ ಗಣ್ಯರು ನಡೆಸಿಕೊಟ್ಟರು. ಎಸ್ ಎಸ್ ಎಲ್ ಸಿ ಟಾಪರ್೯ ಗಳಾದ ಸುದಾನ ವಸತಿಯುತ ಶಾಲೆಯ 2021-22ನೇ ಸಾಲಿನಲ್ಲಿ 99.68% ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನಗಳಿಸಿದ ತನ್ವಿತಾ ಎಂ ಶೆಟ್ಟಿ ಮತ್ತು 96% ಅಂಕಗಳಿಸಿದ ಆದಿತ್ಯ ವಿ ಮುರ ಅವರನ್ನು ಶಾಲು ಹೊದಿಸಿ, ಹಾರಹಾಕಿ ಸ್ಮಾರಣಿಕೆ ನೀಡಿ ಗೌರವಿಸಲಾಯಿತು. ನಂದಕುಮಾರ್ ಬೆಂಗಳೂರು, ಎಂ ಸಂಜೀವ ಶೆಟ್ಟಿ ಮತ್ತು ಮಕ್ಕಳು, ಮುರಳೀಧರ್ ಶೆಟ್ಟಿ, ಸತೀಶ್ ಮಾಡಾವು ಉಪಸ್ಥಿತರಿದ್ದರು.
ಪ್ರಭಾ ಟೀಚರ್ ಮುರ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರಾ ಮತ್ತು ಹೇಮಾವತಿ ಹಾಗೂ ನೂತನ ಕಾರ್ಯದರ್ಶಿ ಶಿಥಿಲ್ ಹಾಗೂ ಎಲ್ಲಾ ಸದಸ್ಯರು ಮತ್ತು ಸಮಾಜದ ಬಾಂಧವರು ಉಪಸ್ಥಿತರಿದ್ದರು. ತನ್ವಿತಾ ಎಂ ಶೆಟ್ಟಿ ವಂದಿಸಿದರು.