ಪುತ್ತೂರು: ದೈವಗಳಿಗೆ ಕೊನೆ ತಂಬಿಲ, ದೇವರ ನಿತ್ಯ ಉತ್ಸವದ ಕೊನೆ ದಿನ, ಯಕ್ಷಗಾನದ ಗೆಜ್ಜೆ ಬಿಚ್ಚಿಸುವುದು ಹೀಗೆ ನಾನಾ ವಿಧದ ಆಚರಣೆಗಳಿಗೆ ಪಾತ್ರವಾಗಿ, ತುಳುನಾಡಿನ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನಮಾನ ಪಡೆದಿರುವ ಪತ್ತನಾಜೆ ಉತ್ಸವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ನಡೆದು, ಬಳಿಕ ಪಲ್ಲಕ್ಕಿ ಉತ್ಸವ ಜರಗಿತು.
ದೇವರ ಉತ್ಸವಾದಿಗಳು ನಡೆದು, ಬಳಿಕ ದೇವರು ಗರ್ಭಗುಡಿಯೊಳಗಾದರು.