ನರಿಮೊಗರು: ನರಿಮೊಗರು ಗ್ರಾಮ ಪಂಚಾಯತ್ ಗ್ರಂಥಾಲಯ, ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಉಚಿತ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಶಾಂತಿಗೋಡು ಹಿ.ಪ್ರಾ. ಶಾಲೆಯಲ್ಲಿ ಆರಂಭಗೊಂಡಿದೆ.
ನರಿಮೊಗರು ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕುಲಾಲ್ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ಆಶಾ ಸಚ್ಚಿದಾನಂದ ಬೊಳ್ಳೆಕ್ಕು,ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಶಾಂತಿಗೋಡು ಶಾಲೆಯ ಮುಖ್ಯಗುರು ಸವಿತಾ, ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಉಪಸ್ಥಿತರಿದ್ದರು.
ನರಿಮೊಗರು ಗ್ರಂಥಾಲಯ ಮೇಲ್ವಿಚಾರಕ ವರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಮೇ 23ರವರೆಗೆ ನಡೆಯಲಿರುವ ಗ್ರಾಮೀಣ ಮಕ್ಕಳ ಬೇಸಿಗೆ ರಜೆ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಮಕ್ಕಳನ್ನು ವಿವಿಧ ರೀತಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆದ್ದು, ವಿಜ್ಞಾನ ಪ್ರಯೋಗಗಳು, ಮಕ್ಕಳಿಗೆ ಸುಲಭ ಗಣಿತ ತಂತ್ರ, ಕ್ಯಾಲಿಗ್ರಫಿ ಬರವಣಿಗೆ, ಕಲೆ ಮತ್ತು ಕರಕುಶಲ, ಯೋಗ ಇತ್ಯಾದಿ ವಿಷಯಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ.