ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸಿಬ್ಬಂದಿ ಅಭಿವೃದ್ಧಿ ಹಾಗೂ ಮೌಲ್ಯಮಾಪನ ಕೋಶ, ಗಣಕವಿಜ್ಞಾನ ವಿಭಾಗ ಹಾಗೂ ಇನ್ನೋವೇಶನ್ ಕೌನ್ಸಿಲ್ ಸಂಯುಕ್ತ ಆಶ್ರಯದಲ್ಲಿ ಕಾಲೇಜಿ ನಗಣಕ ವಿಜ್ಞಾನ ಪ್ರಯೋಗ ಶಾಲೆಯಲ್ಲಿ “ಆನ್ಲೈನ್ ಟೂಲ್ಸ್ ಟುಸಿಂಪ್ಲಿಫೈಟೀಚಿಂಗ್ ಲರ್ನಿಂಗ್ ಪ್ರೊಸೆಸ್” ಎಂಬ ವಿಷಯದ ಮೇಲೆ ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸುವುದರ ಮೂಲಕ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋರ ಪಾಲ್ಗೊಂಡು ಮಾತನಾಡಿ, ತಂತ್ರಜ್ಞಾನ ನಮ್ಮ ಜೀವನದ ಮೇಲೆ ಮಹತ್ತರ ಪ್ರಭಾವ ಬೀರುತ್ತಿದೆ. ನಮ್ಮ ದಿನ ನಿತ್ಯದ ಹಲಾವಾರು ಕಾರ್ಯಗಳನ್ನು ತಂತ್ರಜ್ಞಾನದ ಸಹಾಯದಿಂದ ಸರಳವಾಗಿ ನಿರ್ವಹಿಸಬಹುದಾಗಿದೆ. ಆಧುನಿಕ ಜಗತ್ತಿಗೆ ತಂತ್ರಜ್ಞಾನ ನೀಡಿದ ಕೊಡುಗೆಗಳನ್ನು ಗುರುತಿಸಲು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನುಆಚರಿಸಲಾಗುತ್ತಿದೆ. ಅಧ್ಯಯನ ಮತ್ತು ಅಧ್ಯಾಪನ ಇವೆರಡರಲ್ಲೂ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬಹುದಾಗಿದೆ ಎಂದರು.
ಸರ್ಚ್ ಚಾಟ್ ಬೋಟ್ & ಪಾರಾ ಫ್ರೇಜಿಂಗ್ ಎಂಬ ವಿಷಯದ ಕುರಿತು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಪ್ರಾತ್ಯಕ್ಷಿಕೆ ನೀಡಿದರು. ಬೋಧನೆಗೆ ಸಂಬಂಧಿ ಸಿ ಗೂಗಲ್ ಅಭಿವೃದ್ಧಿ ಪಡಿಸಿದ ಉಪಯುಕ್ತವಾದ ತಂತ್ರಾಂಶಗಳ ಬಳಕೆಯ ಬಗ್ಗೆ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಗೀತಾ ಪೂರ್ಣಿಮಾ, ಗೂಗಲ್ ಫಾರ್ಮ್ಗಳ ಸಮರ್ಪಕ ಬಳಕೆಯ ಬಗ್ಗೆ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ರಾಜೇಶ್ವರಿ ಹಾಗೂ ಗೂಗಲ್ ಕ್ಲಾಸ್ರೂಮ್ ಬಳಸಿ ನಡೆಸ ಬಹುದಾದ ವಿವಿಧ ಕಾರ್ಯಗಳ ಬಗ್ಗೆ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ವಾರಿಜಾ ಪ್ರಾತ್ಯಕ್ಷಿಕೆ ನಡೆಸಿದರು.
ಕಾಲೇಜಿನ ಸಿಬ್ಬಂದಿ ಅಭಿವೃದ್ಧಿ ಹಾಗೂ ಮೌಲ್ಯಮಾಪನ ಕೋಶದ ಸಂಯೋಜಕ ವಂ| ಸ್ಟ್ಯಾನಿ ಪಿಂಟೋ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪ-ಪ್ರಾಂಶುಪಾಲ ಡಾ| ಎ.ಪಿ ರಾಧಾಕೃಷ್ಣವಂದಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಪದವಿ ಹಾಗೂ ಸ್ನಾತ ಕೋತ್ತರ ವಿಭಾಗದ ಬೋಧಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.