ಪುತ್ತೂರು: IRCMD ಶಿಕ್ಷಣ ಸಂಸ್ಥೆ ಮತ್ತು ನರಿಮೊಗರು ಗ್ರಾಮ ಪಂಚಾಯತ್ ಗ್ರಂಥಾಲಯದ ಆಶ್ರಯದಲ್ಲಿ ಉಚಿತ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಮೇ 19ರಿಂದ 23ರವರೆಗೆ ಶಾಂತಿಗೋಡು ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ.
ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಬೇಸಿಗೆ ರಜೆ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಮಕ್ಕಳನ್ನು ವಿವಿಧ ರೀತಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.
ವಿಜ್ಞಾನ ಪ್ರಯೋಗಗಳು, ಮಕ್ಕಳಿಗೆ ಸುಲಭ ಗಣಿತ ತಂತ್ರ, ಕ್ಯಾಲಿಗ್ರಫಿ ಬರವಣಿಗೆ, ಕಲೆ ಮತ್ತು ಕರಕುಶಲ, ಯೋಗ ಇತ್ಯಾದಿ ವಿಷಯಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗುವುದು. ಒಟ್ಟು 5 ದಿನ ನಡೆಯುವ ಶಿಬಿರವು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ. 8ರಿಂದ 13 ವರ್ಷದೊಳಗಿನ ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಆಸಕ್ತರು ನೋಂದಾವಣೆಗಾಗಿ ಪ್ರಫುಲ್ಲ ಗಣೇಶ್ 9945988118 ಅಥವಾ ವರುಣ್ 8197296748 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.