ಸರಣಿ ಆಡಿಯೋ ರಿಲೀಸ್: ಚುನಾವಣೆಗೆ ಭರ್ಜರಿ ತಯಾರಿಯೇ?

ಪುತ್ತೂರು: ಒಂದರ ಬೆನ್ನಿಗೆ ಇನ್ನೊಂದರಂತೆ ಹೊರಬರುತ್ತಿರುವ ಆಡಿಯೋ ತುಣುಕುಗಳು ಚುನಾವಣೆಗೆ ತಯಾರಿಯೇ? ಹೌದು ಎನ್ನುತ್ತಿವೆ ಬಲ್ಲಮೂಲಗಳು.

ಚುನಾವಣೆ ಇನ್ನೇನು ಬಂದೇ ಬಿಟ್ಟಿತು ಎನ್ನುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ವರಸೆಗಳು ಆರಂಭವಾಗತೊಡಗುತ್ತವೆ. ಹೇಳಿಕೆಗಳ ವಾರ್, ವೀಡಿಯೋ ರಿಲೀಸ್ ಹೀಗೆ ಅನೇಕ ರೀತಿ. ಆದರೆ ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಆಡಿಯೋ ವಾರ್ ಆರಂಭವಾಗಿವೆ. ಈ ಆಡಿಯೋ ವಾರ್ ಯಾರನ್ನು ಗುರಿಯಾಗಿಸಿಕೊಂಡಿವೆ? ಉದ್ದೇಶವಾದರೂ ಏನು? ಆಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮಸಿ ಎರಚುವ ಹುನ್ನಾರವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿಬರುತ್ತಿವೆ.

ಇತ್ತೀಚೆಗಷ್ಟೇ ಅಬ್ದುಲ್ ಕುಂಞ ಎನ್ನುವವರೆಂದು ಹೇಳಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಧ್ವನಿಯಲ್ಲಿ ಅದು ಅಬ್ದುಲ್ ಕುಂಞ ಅವರದ್ದೇ ಎಂದು ಹೇಳಬಹುದಾದರೂ, ಅವರು ಮಾಡಿರುವ ಆರೋಪಗಳಿಗೆ ಯಾವುದೇ ತಲೆ – ಬುಡವಿಲ್ಲರಲಿಲ್ಲ. ಆದ್ದರಿಂದ ಪುತ್ತೂರು ಬಿಜೆಪಿ ಘಟಕದ ಶಿಫಾರಸಿನ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷರು ಅಬ್ದುಲ್ ಕುಂಞ ಅವರನ್ನು ಉಚ್ಚಾಟನೆ ಮಾಡಿದ್ದರು.



































 
 

ಇದೀಗ ಮತ್ತೊಂದು ವೀಡಿಯೋ ಪ್ರತ್ಯಕ್ಷವಾಗಿದೆ. ಇದರಲ್ಲಿಯೂ ಅಬ್ದುಲ್ ಕುಂಞಯವರದ್ದೇ ಮಾತು ಮುಂದುವರಿದಿದೆ. ಇದರಿಂದಾಗಿಯೇ ಹೊಸ ಹೊಸ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಅಭಿವೃದ್ಧಿಯನ್ನೇ ಮೂಲವಾಗಿಟ್ಟುಕೊಂಡು ಹಿಂದುತ್ವ ಹಾಗೂ ಆರ್‌ಎಸ್‌ಎಸ್ ಮೂಲಗಳಿಂದ ಬಂದAತಹ ಜನಪ್ರತಿನಿಧಿಗಳಿಗೆ ಇಂತಹ ಅಪಪ್ರಚಾರ ಎದುರಿಸುವುದು ಸರ್ವೇಸಾಮಾನ್ಯ ಸಂಗತಿ.

ಇತರ ಕ್ಷೇತ್ರಗಳಲ್ಲೂ ಅಪಪ್ರಚಾರದ ಕಯಾಲಿ:

ಇಂತಹ ಸುಳ್ಳು ಸುದ್ದಿಗಳು ಬರೀಯ ಪುತ್ತೂರು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳಲ್ಲೂ ಇಂತಹ ಅಪಪ್ರಚಾರಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇದಕ್ಕೆ ಉತ್ತರವಾಗಿ ಕಾರ್ಕಳ ಬಿಜೆಪಿ – “ಹಿಂದೂ ವಿರೋಧಿ ಘಟನೆ ಸಂದರ್ಭ ಗಂಟಲು ಕಟ್ಟಿದವರು ಇದೀಗ ಮಾತನಾಡುತ್ತಿದ್ದಾರೆ” ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿರುವುದನ್ನು ನಾವು ಗಮನಿಸಬಹುದು.

ಅನುದಾನಗಳ ಮಹಾಪೂರ:

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಅನುದಾನಗಳು ಹರಿದು ಬಂದಿವೆ. ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಕಿಂಡಿ ಅಣೆಕಟ್ಟು, ರಸ್ತೆ ಕಾಮಗಾರಿ, ಸೇತುವೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಶೈಕ್ಷಣಿಕ ಚಟುವಟಿಕೆ, ಧಾರ್ಮಿಕ ಕ್ಷೇತ್ರಗಳಿಗೆ ಅನುದಾನವನ್ನು ಪುತ್ತೂರಿಗೆ ತರುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಅಲ್ಲದೇ, ಆಡಳಿತ ಸುವ್ಯವಸ್ಥೆಯನ್ನು ಕಾಯ್ದುಕೊಂಡಿರುವುದನ್ನು ಕಾಣಬಹುದು. ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಬಿಡುವು ಮಾಡಿಕೊಳ್ಳದೇ, ಕ್ಷೇತ್ರದ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಚುನಾವಣೆಯನ್ನಷ್ಟೇ ನೋಡಿಕೊಳ್ಳದೇ, ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದನ್ನು ಸಹಿಸಿಕೊಳ್ಳಲಾಗದವರು ಆಡಿಯೋ ತುಣುಕುಗಳ ಡ್ರಾಮಾ ಶುರು ಮಾಡಿಕೊಂಡಿದ್ದಾರೆಯೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಅಪಪ್ರಚಾರ ನಿಲ್ಲಿಸಿ:

ಅಭಿವೃದ್ಧಿ ಕಾರ್ಯಗಳನ್ನು ಎದುರಿಸಲಾಗದವರಿಗೆ ಅಪಪ್ರಚಾರವೇ ಅಸ್ತç. ಇದೇನು ಹೊಸ ವಿಚಾರವಲ್ಲ. ಹಿಂದಿನಿAದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದನ್ನೇ ಈಗಲೂ ಮುಂದುವರಿಸಿಕೊAಡು ಬರಲಾಗುತ್ತಿದೆ. ಇದರಲ್ಲಿ ಸ್ಥಳೀಯ ವಿಷಯವಲ್ಲದೇ ರಾಷ್ಟಿಯ ವಿಷಯಗಳನ್ನು ಇದಕ್ಕೆ ಹೊಸಿದುಕೊಳ್ಳಲಾಗಿದೆ. ಆದ್ದರಿಂದ ಇದರಿಂದ ತಿಳಿದುಬರುವ ಸ್ಪಷ್ಟವಾದ ವಿಷಯವೇನೆಂದರೆ ಇದು ಅಪಪ್ರಚಾರಕ್ಕಾಗಿ ನಡೆಸುವ ಆಡಿಯೋ.

ದಕ್ಷಿಣ ಕನ್ನಡದ ಪ್ರಜ್ಞಾವಂತ ನಾಗರಿಕರು ಇಂತಹ ಅಪಪ್ರಚಾರಗಳನ್ನು ಅರ್ಥೈಸಿಕೊಳ್ಳುವ ಚಾಕಚಕ್ಯತೆ ಹೊಂದಿದ್ದಾರೆ. ಆದ್ದರಿಂದ ಇಂತಹ ಅಪಪ್ರಚಾರಗಳಿಗೆ ದೊಡ್ಡ ಮಾನ್ಯತೆ ನೀಡಬೇಕಾಗಿಲ್ಲ. ಸಾರ್ವಜನಿಕ ವಲಯದಲ್ಲಿ ಇಂತಹ ಆಡಿಯೋಗಳಿಗೆ ದೊಡ್ಡ ಪ್ರಾಮುಖ್ಯತೆಯೂ ಸಿಗುವುದಿಲ್ಲ ಎನ್ನುವ ಮಾತು ಸಾರ್ವಜನಿಕರದ್ದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top