ಪುತ್ತೂರು: ಚುನಾವಣಾ ಪ್ರಚಾರ ಸಭೆಗಳಲ್ಲಿ ಅಶೋಕ್ ಕುಮಾರ್ ರೈ ಅವರು ಎಸ್.ಡಿ.ಪಿ.ಐ. ಅನ್ನು ಕೆಣಕಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಉತ್ತರ ನೀಡಲಾಗುವುದು ಎಂದು ಎಸ್.ಡಿ.ಪಿ.ಐ. ರಾಜ್ಯ ವಕ್ತಾರ ರಿಯಾಜ್ ಕಡಂಬು ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲೀಲ್ ಕರೋಪಾಡಿ ಕೊಲೆಗೈದ ವ್ಯಕ್ತಿಗೆ ರಕ್ಷಣೆ ನೀಡಿರುವ, ತನ್ನ ಅಪಾರ್ಟ್ ಮೆಂಟಿನಲ್ಲಿ ಮುಸ್ಲಿಮರಿಗೆ ಅವಕಾಶವಿಲ್ಲ ಎಂದು ಬೋರ್ಡ್ ಹಾಕಿರುವ ವ್ಯಕ್ತಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ. ಭಾಷಣಗಳಲ್ಲಿ ಕಾಂಗ್ರೆಸ್ ಸೆಕ್ಯುಲರ್ ಪಕ್ಷ ಎಂದು ಹೇಳಿಕೊಳ್ಳುವ ರಾಷ್ಟ್ರೀಯ ನಾಯಕರು, ಪುತ್ತೂರಿನಲ್ಲಿ ಸಂಘ ಪರಿವಾರದ ವ್ಯಕ್ತಿಗೆ ಟಿಕೇಟ್ ನೀಡಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ಅಭ್ಯರ್ಥೀ ಸಂಘ ಪರಿವಾರದವರು, ಕಾಂಗ್ರೆಸಿನ ಅಭ್ಯರ್ಥಿಯೂ ಸಂಘ ಪರಿವಾರದವರು, ಪಕ್ಷೇತರರಾಗಿ ಸ್ಪರ್ಧಿಸಿದವರೂ ಸಂಘ ಪರಿವಾರದವರು. ಆದ್ದರಿಂದ ಪುತ್ತೂರಿನಲ್ಲಿ ನ್ಯಾಯ, ನೀತಿಯ ಪರವಾಗಿರುವ ಎಸ್.ಡಿ.ಪಿ.ಐ. ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದೆ ಎಂದರು.
ಫ್ಯಾಸಿಸ್ಟ್ ಸರಕಾರದ ಧೊರಣೆಯಿಂದಾಗಿ ಶಾಫಿ ಬೆಳ್ಳಾರೆ ಜೈಲಿಗೆ ಹೋಗುವಂತಾಯಿತು. ಕೋಮುವಾದವನ್ನು ಸೃಷ್ಟಿಸಿ ಆ ಮೂಲಕ ಆಡಳಿತವನ್ನು ನಡೆಸುವ ಪಕ್ಷ ಬಿಜೆಪಿ, ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುತ್ತಿವೆ. ಇದರಿಂದಾಗಿ ಇಂದು ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಯಾಗಿದೆ ಎಂದು ವಿಶ್ಲೇಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಕ್ಷೇತ್ರ ಸಮಿತಿ ಸದಸ್ಯ ಇಬ್ರಾಹಿಂ ಹಾಜಿ ಸಾಗರ್, ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮರ್ದ, ತಾಲೂಕು ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.