ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 16 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬೈರಮೂಲೆ ಸುಬ್ಬಪ್ಪ ಪಾಟಾಳಿ ಮತ್ತು ವೇದಾವತಿ ಎ ದಂಪತಿಗಳ ಪುತ್ರ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬಿ ಎಸ್ ಸುದರ್ಶನ್ ಐವತೋಕ್ಲು ಗ್ರಾಮದ ಕಮಿಲ ಪ್ರವೀಣ್ ಕೆ. ಎಸ್ ಮತ್ತು ಮಲ್ಲಿಕಾ ಕೆ ದಂಪತಿಯ ಪುತ್ರ ಪಾಂಡಿಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಚಿಂತ್ಯ ಕೆ. ಪಿ, ಕೆಯ್ಯುರು ಗ್ರಾಮದ ಮಾಡಾವು ಪ್ರಸನ್ನ ಎಂ ಪಿ ಮತ್ತು ಪುಷ್ಪಲತಾ ಹೆಚ್ ದಂಪತಿಯ ಪುತ್ರ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಪ್ರಾವೀಣ್ಯ ಎಂ, ಬಂದಡ್ಕ ಗ್ರಾಮದ ಪಲಾರ್ ಮೂಲ ವಿವೇಕಾನಂದ ಪಿ ಮತ್ತು ವಂದ್ಯಾ ಎಂ ಸಿ ದಂಪತಿಯ ಪುತ್ರ ಮಾಣಿಮೂಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಗಸ್ತ್ಯ ಗೌಡ, ಕೊಡಿಯಾಲ ಗ್ರಾಮದ ಕುಂಟನಿ ಸೀತಾರಾಮ ಮತ್ತು ಸುಮಿತ್ರಾ ಎಸ್ ದಂಪತಿಯ ಪುತ್ರಿ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ತನ್ವಿ ಕೆ. ಎಸ್ ಕೊಂಬಾರು ಗ್ರಾಮದ ಕಾಪಾರು ಸೀತಾರಾಮ ಮತ್ತು ಪವಿತ್ರ ದಂಪತಿಯ ಪುತ್ರ ಮೊಗೇರಡ್ಕ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆದಿತ್ಯ ಕೆ. ಎಸ್, ಬಾಳಿಲ ಗ್ರಾಮದ ಹೊನ್ನಡ್ಕ ರವಿಚಂದ್ರ ಪಿ ಮತ್ತು ಆಶಾ ಬಿ ದಂಪತಿಯ ಪುತ್ರ ಬೆಳ್ಳಾರೆ ಜ್ಞಾನಂಗಂಗಾ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿ ವಿಯಾನ್ ಆರ್, ಅಮರ ಮುಡ್ನೂರು ಗ್ರಾಮದ ಸಂಕೇಶ ಎಸ್ ಸತೀಶ್ ಮತ್ತು ತುಳಸಿ ಪಿ ದಂಪತಿಯ ಪುತ್ರ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಎಸ್, ಎಡಮಂಗಲ ಗ್ರಾಮದ ಹೊಸಮನೆ ತ್ಯಾಗರಾಜ ಹೆಚ್ ಎಸ್ ಮತ್ತು ಶಿಲ್ಪಾ ಎ ದಂಪತಿಯ ಪುತ್ರಿ ಅಲೆಕ್ಕಾಡಿ ಮುರುಳ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಮಸ್ವಿ ಹೆಚ್ ಟಿ, ಮರ್ಕಂಜ ಗ್ರಾಮದ ಹೊಸೋಳಿಕೆ ಮೋಹನ್ ಹೆಚ್ ಮತ್ತು ಗೀತಾ ದಂಪತಿಯ ಪುತ್ರಿ ದಾಸರಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಹರ್ಷಿಣಿ ಹೆಚ್, ಅಲೆಟ್ಟಿ ಗ್ರಾಮದ ಕಣಕ್ಕೂರು ಜಯರಾಜ್ ಕೆ ಬಿ ಮತ್ತು ಅಶ್ವಿತಾ ಎಂ ಎಸ್ ದಂಪತಿಯ ಪುತ್ರ ಕೊಲ್ಚಾರ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಧ್ವಿಕ್ ಕೃಷ್ಣ, ಅಮರ ಮುಡ್ನೂರು ಮೂಡೆಕಲ್ಲು ಮೋಹನ್ ನಾಯ್ಕ ಎಂ ಮತ್ತು ಸಾವಿತ್ರಿ ದಂಪತಿಯ ಪುತ್ರಿ ಕುಕ್ಕುಜಡ್ಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಣೀತಿ ಎಂ ಕಲ್ಮಡ್ಕ ಗ್ರಾಮದ ಮಾಳಪ್ಪಮಕ್ಕಿ ಚಂದ್ರಾ ಎಂ ಮತ್ತು ಹೆಚ್ ಪಿ ಸುನೀತಾ ದಂಪತಿಯ ಪುತ್ರಿ ಕುಕ್ಕುಜಡ್ಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವಿಸ್ಮಿತಾ, ನಾಲ್ಕೂರು ಗ್ರಾಮದ ಅಂಜೇರಿ ವೀರಪ್ಪ ನಾಯ್ಕ ಮತ್ತು ಪುಷ್ಪಾ ದಂಪತಿಯ ಪುತ್ರಿ ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶಾಲ್ಮಲಿ ಎ ವಿ, ಮಡಪ್ಪಾಡಿ ಗ್ರಾಮದ ಪೂoಬಾಡಿ ಮೋಹನ್ ಜಿ ಎ ಮತ್ತು ವಿಮಲಾ ಕೆ ದಂಪತಿಯ ಪುತ್ರಿ ಮಡಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಹಸ್ಮಿ ಮೋಹನ್ ಜಿ ಮಾಡ್ನೂರು ಗ್ರಾಮದ ಕಾವು ವಿನಯ ಜೆ ಮತ್ತು ಕಮಲ ಎಂ ದಂಪತಿಯ ಪುತ್ರಿ ಕಾವು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಿಶ್ವಿತಾ ವಿ ನವೋದಯ ವಿದ್ಯಾಲಯಕ್ಕೆ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿದ್ದಾರೆ. ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದವರು ಆರರಿಂದ ಹನ್ನೆರಡನೇ ತರಗತಿಯವರೆಗೆ ಕೇಂದ್ರೀಯ ಪಠ್ಯಕ್ರಮದಲ್ಲಿ ವಸತಿಯುತ ಉಚಿತ ಶಿಕ್ಷಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಜಿಲ್ಲೆಯಿಂದ ಒಟ್ಟು 80 ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹತೆ ಪಡೆದಿದ್ದು, ಈ ಪೈಕಿ 16 ವಿದ್ಯಾರ್ಥಿಗಳು ಜ್ಞಾನದೀಪ ತರಬೇತಿ ಕೇಂದ್ರದಿಂದ ಆಯ್ಕೆಯಾಗಿದ್ದಾರೆ.
ಒಟ್ಟು 223 ವಿದ್ಯಾರ್ಥಿಗಳು ಆಯ್ಕೆ
ಪ್ರಸಕ್ತ ವರ್ಷ ಜ್ಞಾನದೀಪ ನವೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗುವ ಮೂಲಕ ಇದುವರೆಗೆ ಇಲ್ಲಿ ತರಬೇತಿ ಪಡೆದ 223 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. 2026-27ನೇ ಸಾಲಿನಲ್ಲಿ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಎ.15 ರಿಂದ ಮೇ. 15ರವರೆಗೆ ನಡೆಯುವ ವಿಶೇಷ ಬೇಸಿಗೆ ತರಬೇತಿ ಶಿಬಿರ ಮತ್ತು ಜೂನ್ ತಿಂಗಳಿನಿಂದ ನಡೆಯುವ ತರಬೇತಿಗೆ ದಾಖಲಾತಿ ಆರಂಭಗೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.



























