ಅಸಭ್ಯ ಹಾಡಿಗೆ ಕುಣಿದ ನಟಿ ನೋರಾ ಫತೇಹಿ ವಿರುದ್ಧ ಫತ್ವಾ

ಬಿರುಗಾಳಿ ಎಬ್ಬಿಸಿರುವ ಕೆಡಿ ಚಿತ್ರದ ಅಸಭ್ಯ ಹಾಡು

ಲಖನೌ: ಕೆಡಿ ಸಿನಿಮಾದ ವಿವಾದಿತ `ಸರ್ಸೆ ಸೆರಗ ಸರ್ಸೆ’ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಬಾಲಿವುಡ್‌ ನಟಿ ನೋರಾ ಫತೇಹಿ ವಿರುದ್ಧ ಇಸ್ಲಾಂ ಧರ್ಮದ ಮುಖಂಡರು ಫತ್ವಾ ಹೊರಡಿಸಿದ್ದಾರೆ.

ಉತ್ತರ ಪ್ರದೇಶದ ಆಲಿಗಢದ ಮುಸ್ಲಿಂ ದಾರುಲ್ ಇಫ್ತಾದಿಂದ ಮುಖಂಡರು `ಸರ್ಸೆ ಸೆರಗ ಸರ್ಸೆ’ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ ಮಾಡಿದ್ದಾರೆ. ಈ ಹಾಡು ಆಕ್ಷೇಪಾರ್ಹವಾಗಿದ್ದು, ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವೆಂದು ಪರಿಗಣಿಸುವ ವಿಷಯಗಳನ್ನು ಹೊಂದಿದೆ. ಹೀಗಾಗಿ ಈ ಹಾಡಿಗೆ ನೃತ್ಯ ಮಾಡಿದ್ದಕ್ಕಾಗಿ ಫತ್ವಾ ಜಾರಿ ಮಾಡಿದೆ.



























































 
 

ನಟಿ ನೋರಾ ಫತೇಹಿ ಕೆನಡಾ ಮೂಲದವರಾಗಿದ್ದು, ಕೆಲ ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಹಿಂದಿ, ತೆಲುಗು ಹಾಗೂ ಮಲಯಾಳಂನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚಿಗಷ್ಟೇ ನಟಿ ಈ ಬಗ್ಗೆ ಮಾತನಾಡಿ, ಮೂರು ವರ್ಷಗಳ ಹಿಂದೆ ಈ ಹಾಡನ್ನು ಕನ್ನಡದಲ್ಲಿ ಚಿತ್ರೀಕರಿಸಿದ್ದರು. ಈ ಹಾಡನ್ನು ಹೇಗೆ ಅಳವಡಿಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ತಿಳಿದಿರಲಿಲ್ಲ. ಈ ಹಾಡನ್ನು ವಿರೋಧಿಸಿದ್ದಕ್ಕೆ ಧನ್ಯವಾದಗಳು. ಈ ಹಾಡನ್ನು ಅನುವಾದಿಸಿದಾಗ ನನಗೆ ಏನೂ ಅನುಚಿತ ಅಥವಾ ಅಸಭ್ಯ ಗೊತ್ತಾಗಲಿಲ್ಲ. ಯಾಕೆಂದರೆ ನನಗೆ ಕನ್ನಡ ಅರ್ಥ ಆಗುವುದಿಲ್ಲ. ಅವರು ಏನು ಹೇಳಿದ್ದಾರೋ ಅದನ್ನು ನಾನು ಮಾಡಿದ್ದೇನೆ. ಈಗ ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದ ಹಾಡಿಗೆ ನನ್ನಿಂದ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ಹೇಳಿದ್ದರು.

ಈಗಾಗಲೇ ಕೇಂದ್ರ ಸರ್ಕಾರ ಈ ಹಾಡನ್ನು ಬ್ಯಾನ್ ಮಾಡಿ, ಆದೇಶ ಹೊರಡಿಸಿದೆ. ಜೊತೆಗೆ ರಾಷ್ಟ್ರೀಯ ಮಹಿಳಾ ಆಯೋಗವು ಮಾಧ್ಯಮಗಳ ವರದಿ ಹಿನ್ನೆಲೆ ನೋಟಿಸ್ ಜಾರಿ ಮಾಡಿ, 1990ರ ಎನ್‌ಸಿಡಬ್ಲ್ಯೂ ಕಾಯ್ದೆಯ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದೆ. ಲೈಂಗಿಕವಾಗಿ ಸೂಚಿಸುವ, ಆಕ್ಷೇಪಾರ್ಹ, ಭಾರತೀಯ ನ್ಯಾಯ ಸಂಹಿತಾ, ಐಟಿ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿರುವ ನಿಬಂಧನೆಗಳನ್ನು ಸಿನಿಮಾ ಟೀಂ ಉಲ್ಲಂಘಿಸಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

ನಿರ್ದೇಶಕ ಪ್ರೇಮ್, ನಿರ್ಮಾಪಕ ವೆಂಕಟ್ ನಾರಾಯಣ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್ ಹಾಗೂ ಹಿಂದಿ ಹಾಡಿನ ಬರಹಗಾರ ರಕೀಬ್ ಆಲ್ಬಂಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದ್ದು, ಮಾ.24 ರಂದು ಮಧ್ಯಾಹ್ನ 12:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಜೊತೆಗೆ ಸಂಬಂಧಿತ ದಾಖಲಾಗಳೊಂದಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದೆ.

error: Content is protected !!
Scroll to Top