ಮಹಾಲಿಂಗೇಶ್ವರ ದೇಗುಲದ ಸಮೀಪದಿಂದ ರೈಲ್ವೆ ರಸ್ತೆಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ನಿರ್ಮಾಣ: ಫಲಾನುಭವಿಗಳ ಜೊತೆ ಶಾಸಕರ ಸಭೆ

ಪುತ್ತೂರು: ಮುಖ್ಯ ರಸ್ತೆಯಿಂದ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲೆ ರೈಲ್ವೆ ರಸ್ತೆಗೆ ಸಂಪರ್ಕ ಕಲ್ಪಿಸುವ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಹಾಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳೀಯ ಫಲಾನುಭವಿಗಳ ಜೊತೆಗೆ ಸಭೆ ನಡೆಸಿದರು.

ಈ ರಸ್ತೆಯು ಜನರ ಬಹು ಸಮಯದ ಬೇಡಿಕೆಯಾಗಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ಈ ರಸ್ತೆಯ ಕನಸು ನನಸಾಗುತ್ತಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ. ಈ ರಸ್ತೆ ನಿರ್ಮಾಣ ನನಸಾದಲ್ಲಿ ‌ಸ್ಥಳೀಯ ಸುಮಾರು 25 ಮನೆಗಳಿಗೆ ತೆರಳಲು ಅನುಕೂಲ ಕಲ್ಪಿಸಿದಂತಾಗಲಿದೆ.

ಈ ಸಭೆಯಲ್ಲಿ ಕೆ.ಪಿ. ಆಳ್ವ, ಶ್ರೀ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ನೆಲ್ಲಿಕಟ್ಚೆ ಜಗದೀಶ್ ಶೆಟ್ಟಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.



























































 
 
error: Content is protected !!
Scroll to Top