ಕೇರಳದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ್ದ ಆರೋಪಿ ಅಂದರ್

ಕೊಚ್ಚಿ: ವಂದೇ ಭಾರತ್ ರೈಲಿಗೆ ‌ಕೇರಳ ಅಲುವಾ ಎಂಬಲ್ಲಿ ಕಲ್ಲು ತೂರಿದ್ದ ಯುವಕನನ್ನು ರೈಲ್ವೆ ಸಂರಕ್ಷಣಾ ದಳ ವಶಕ್ಕೆ ಪಡೆದಿದೆ.

ಬಂಧಿತನನ್ನು ಪಾರಕ್ಕಡವು ನಿವಾಸಿ ಸುಜಿತ್ ಸುರೇಶ್(19) ಎಂದು ಗುರುತಿಸಲಾಗಿದೆ.

ತಿರುವನಂತಪುರಂ ಮತ್ತು ಮಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲಿನ ಮೇಲೆ ಮಾ. 7 ರಂದು ಕಲ್ಲು ತೂರಿದ ಘಟನೆ ನಡೆದಿತ್ತು. ಇದರಿಂದ ರೈಲಿನ ಕಿಟಕಿ ಗಾಜುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿ, ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.



























































 
 

ವಿಚಾರಣೆಯ ವೇಳೆ ಆರೋಪಿ ಯುವಕ ‘ಪ್ರೇಮ ವೈಫಲ್ಯದಿಂದ ಮಾನಸಿಕವಾಗಿ ನೊಂದು, ಆಕ್ರೋಶದಿಂದ ಈ ಕೃತ್ಯ ಎಸಗಿದ್ದಾಗಿ’ ಒಪ್ಪಿಕೊಂಡಿದ್ದಾನೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!
Scroll to Top