ಅಧ್ಯಕ್ಷರಾಗಿ ಮೋಹನ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ನೇಮಕ
ಪುತ್ತೂರು: ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನ ಸಮಿತಿಯ ಕುರಿಯ ಏಳ್ನಾಡುಗುತ್ತಿನ ವಾರ್ಷಿಕ ಮಹಾಸೇವೆ ಅಧ್ಯಕ್ಷ ಚೆನ್ನಪ್ಪ ರೈ ಬಳಜ್ಜ ಇವರ ನೇತೃತ್ವದಲ್ಲಿ ಸಾಂಗವಾಗಿ ಜರುಗಿತು.
ಇದೇ ಸಂದರ್ಭದಲ್ಲಿ 2025ನೇ ಸಾಲಿನ ವರದಿ ಮಂಡನೆ, ಅನುಮೋದನೆಗಳು ನಡೆದವು.
ಸಮಿತಿಯ ಪುನಾರಚನೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಮೋಹನ್ ರೈ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್’ನ ಅಧ್ಯಕ್ಷ ಮತ್ತು G5 Nexus ಸಂಸ್ಥೆಯ ಪಾಲುದಾರ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ಏಳ್ನಾಡುಗುತ್ತು ಇವರು ಸರ್ವಾನುಮತದಿಂದ ಆಯ್ಕೆಯಾದರು. ಉಳಿದಂತೆ ಖಜಾಂಜಿಯಾಗಿ ಸುಭಾಷಿಣಿ ಕೆ. ರೈ ಮಾಡಾವು ಏಳ್ನಾಡುಗುತ್ತು, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಶೆಟ್ಟಿ ನಂಜೆ ಏಳ್ನಾಡುಗುತ್ತು ಅವರನ್ನು ಆಯ್ಕೆ ಮಾಡಲಾಯಿತು.
ಸಂಚಾಲಕರಾಗಿ ಕುಟುಂಬದ ಹಿರಿಯ ಕುರಿಯ ಸೀತಾರಾಮ ರೈ ಏಳ್ನಾಡುಗುತ್ತು ಮತ್ತು ಗೌರವಾಧ್ಯಕ್ಷರಾಗಿ ಕೆ.ಯಂ ವಿಶ್ವನಾಥ ರೈ ಮಾಡಾವು ಏಳ್ನಾಡುಗುತ್ತು ಇವರನ್ನೇ ಮುಂದುವರಿಸಬೇಕೆಂಬ ಸಭೆಯ ತೀರ್ಮಾನಕ್ಕೆ ಸಮ್ಮತಿಸಲಾಯಿತು.
ಅಧ್ಯಕ್ಷರಿಂದ ಉಪಕಾರ ಸ್ಮರಣೆ
ಅಧ್ಯಕ್ಷ ಚೆನ್ನಪ್ಪ ರೈ ಅವರು ಮಾತಾಡಿ ಅವರ ಅವಧಿಯಲ್ಲಿ ಸಹಕರಿಸಿದ ಎಲ್ಲ ರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಮರ್ಪಕ ಆಯ ವ್ಯಯ ಲೆಕ್ಕ ಮಂಡನೆ
ನೂತನ ಪ್ರ. ಕಾರ್ಯದರ್ಶಿ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ಅವರು ಸಮರ್ಪಕ ಮತ್ತು ದೋಷರಹಿತವಾದ
ಖರ್ಚು-ವೆಚ್ಚಗಳ ಪಟ್ಟಿಯನ್ನು ವಾಚಿಸಿದರು.
SCDCC ಬ್ಯಾಂಕ್’ನ ನಿರ್ದೇಶಕ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಸ್. ಬಿ. ಜಯರಾಮ ರೈಯವರು ಮಾತಾಡಿ ಹಿಂದಿನ ಸಮಿತಿಗೆ ಅಭಿನಂದನೆ ಸಲ್ಲಿಸಿ, ನೂತನ ಸಮಿತಿಗೆ ಶುಭ ಹಾರೈಸಿದರು.



























