ಬಂಟ್ವಾಳ : ಏಳು ಅಡಿ ಉದ್ದವಿದ್ದ ಬೃಹತ್ ಗಾತ್ರದ ಮೊಸಳೆಯೊಂದು ಮನೆಯಂಗಳಕ್ಕೆ ಬಂದ ಘಟನೆ ಬಂಟ್ವಾಳದಲ್ಲಿ ಮುಂಜಾನೆ ವೇಳೆ ಸಂಭವಿಸಿದೆ. ಸರಪಾಡಿ ನಾವೂರು ಗ್ರಾಮದ ಪೂಪಾಡಿಕಟ್ಟೆ ನೆಕ್ಕಿಲಾರು ರಾಜೇಶ್ ನಾಯಕ್ ಎಂಬವರ ಮನೆಯ ಅಂಗಳಕ್ಕೆ ಈ ಮೊಸಳೆ ಬಂದಿದೆ. ನೇತ್ರಾವತಿ ನದಿ ತೀರದಿಂದ ಅವರ ಮನೆ ಸುಮಾರು 250 ಮೀಟರ್ ದೂರದಲ್ಲಿದೆ.
ನೇತ್ರಾವತಿ ನದಿ ತೀರದಿಂದ ಸುಮಾರು 250 ಮೀಟರ್ ದೂರದಲ್ಲಿ ಇವರ ಮನೆಯಿದೆ. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಮನೆಯ ಹೊರಗೆ ತರಗೆಲೆಗಳ ಶಬ್ದ ಕೇಳಿ ಬಂದಾಗ ರಾಜೇಶ್ ನಾಯಕ್ ಎದ್ದು ಹೊರಗೆ ಬಂದಿದ್ದಾರೆ. ಆಗ ಅಂಗಳದಲ್ಲೇ ಬೃಹತ್ ಗಾತ್ರದ ಮೊಸಳೆ ಇರುವುದು ಕಂಡುಬಂದಿದೆ.
ನದಿಯ ಸಾಕಷ್ಟು ದೂರದಲ್ಲಿ ಮೊಸಳೆ ಇದ್ದರೂ ಹೀಗೆ ನದಿ ದಾಟಿ ಮನೆಯಂಗಳಕ್ಕೆ ಬಂದಿರುವುದು ಇದೇ ಮೊದಲು ಎನ್ನಲಾಗಿದೆ. ಮನೆಯವರು ಲೈಟ್ ಹಾಕಿದಾಗ ಮೊಸಳೆ ತೋಟದತ್ತ ಹೋಗಿದೆ. ಈ ಬಗ್ಗೆ ಅವರು ಇಲಾಖೆಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.



























